Monday , January 22 2018
Home / Film News / Mollywood / ಮಲಯಾಳಂನ ಈ ಖ್ಯಾತ ನಟಿಯ ಈಗಿನ ಕತೆ ಕೇಳಿದರೆ ನಿಮ್ಗೆ ಬೇಸರ ಆಗಬಹುದು..
Buy Bitcoin at CEX.IO

ಮಲಯಾಳಂನ ಈ ಖ್ಯಾತ ನಟಿಯ ಈಗಿನ ಕತೆ ಕೇಳಿದರೆ ನಿಮ್ಗೆ ಬೇಸರ ಆಗಬಹುದು..

ತಿರುವನಂತಪುರಂ : ಇವರು ಕವಿತಾ ಲಕ್ಷ್ಮಿ. ಮಾಲಿವುಡ್​ನ ಖ್ಯಾತ ನಟಿ. 1996ರಲ್ಲಿ ಇವರು ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಸೂಪರ್​ಸ್ಟಾರ್​ಗಳಾದ ಮೋಹನ್​ಲಾಲ್ ಮತ್ತು ಮಮ್ಮುಟ್ಟಿ ಸೇರಿದಂತೆ ಹಲವರೊಂದಿಗೆ ಇವರು ಸ್ಕ್ರೀನ್ ಶೇರ್ ಮಾಡಿದ್ದವರು. ಅದೂ ಅಲ್ಲದೆ, ಹಲವಾರು ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು.

ಆದರೆ, ಸದ್ಯ ಕವಿತಾ ಲಕ್ಷ್ಮಿ ತುಂಬಾ ಕಷ್ಟದಲ್ಲಿದ್ದಾರೆ. ಸಿನೆಮಾ ಮತ್ತು ಕಿರುತೆರೆಯಲ್ಲಿ ಅವಕಾಶಗಳು ಕಡಿಮೆಯಾಗ ತೊಡಗಿದೆ. ಕುಟುಂಬ ನಿರ್ವಹಣೆಯೂ ಕಷ್ಟವಾಗುತ್ತಿದೆ. ವಿದೇಶದಲ್ಲಿ ಓದುತ್ತಿರುವ ಮಗನಿಗಾಗಿ ಹಣ ಹೊಂದಿಸುವುದಕ್ಕೆ ಇವರು ಪ್ರಯಾಸ ಪಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಕುಟುಂಬದ ರಥ ಸಾಗಿಸುವ ಸಲುವಾಗಿ ಕವಿತಾ ಲಕ್ಷ್ಮಿ ಸಣ್ಣದೊಂದು ಫುಡ್ ಸ್ಟಾಲ್ ಇಟ್ಟುಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇವರಿಗೆ ಇದು ಅನಿವಾರ್ಯವೂ ಆಗಿದೆ. ಈ ಫುಡ್​​ ಸ್ಟಾಲ್​ನಿಂದ ಇವರ ಆರೋಗ್ಯ ಕೂಡಾ ಹದಗೆಡುತ್ತಿದೆ.

ಈ ಎಲ್ಲಾ ಕಷ್ಟದ ನಡುವೆಯೂ ಇವರು ಬದುಕಿನ ಖುಷಿಯನ್ನು ಕಳೆದುಕೊಂಡಿಲ್ಲ. ಬೇರೆಯವರ ಸಹಾಯ ಇಲ್ಲದೆಯೇ ತನ್ನದೇ ಸ್ವಂತ ಶಕ್ತಿಯಲ್ಲಿ ಬದುಕು ನಡೆಸಬೇಕು ಎಂಬ ಛಲ ಇವರದ್ದು… ಇವರ ಈ ಪ್ರಯತ್ನವೇ ಎಲ್ಲರಿಗೂ ಸ್ಫೂರ್ತಿ.

CEX.IO Bitcoin Exchange

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಿರೀಕ್ಷಣಾ ಜಾಮೀನಿಗೆ ಕಾವ್ಯ ಮಾಧವನ್​ ಅರ್ಜಿ

ತಿರುವನಂತಪುರಂ : ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಮಾಧವನ್​ ಕೇರಳ ಹೈಕೋರ್ಟ್​ಗೆ ನಿರೀಕ್ಷಣಾ …

error: Content is protected !!