Tuesday , November 13 2018
ಕೇಳ್ರಪ್ಪೋ ಕೇಳಿ
Home / Film News / Bollywood / ರಣಬೀರ್​​​ಗೆ ಪದೇ ಪದೇ ಕರೆ ಮಾಡುತ್ತಿರುವ ಸಂಜಯ್​ ಪತ್ನಿ…! : ಕಾರಣ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬಹುದು, ನಗೂ ಬರಬಹುದು…!

ರಣಬೀರ್​​​ಗೆ ಪದೇ ಪದೇ ಕರೆ ಮಾಡುತ್ತಿರುವ ಸಂಜಯ್​ ಪತ್ನಿ…! : ಕಾರಣ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬಹುದು, ನಗೂ ಬರಬಹುದು…!

ಮುಂಬೈ : ಬಾಲಿವುಡ್ ನಿರ್ದೇಶಕ ರಾಜ್​ಕುಮಾರ್ ಇರಾನಿ ಬಾಲಿವುಡ್​ ನಟ ಸಂಜಯ್​ ದತ್​ ಜೀವನವನ್ನು ಚಿತ್ರ ಮಾಡುತ್ತಿದ್ದಾರೆ. ರಣಬೀರ್ ಕಪೂರ್​​​​​​ ಸಂಜಯ್​ ದತ್​ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಸಂಜು ಎಂದು ಹೆಸರೂ ಇಡಲಾಗಿದೆ. 2018 ರ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಸಂಜು ಕೂಡಾ ಇದೆ. ರಣಬೀರ್ ಕೂಡಾ ಸಂಜಯ್ ಪಾತ್ರಕ್ಕೆ ಸಾಕಷ್ಟು ಬೆವರಳಿಸಿದ್ದಾರೆ.

ಆದರೆ, ಈ ಎಲ್ಲದರ ನಡುವೆ ಒಬ್ಬರು ಮಾತ್ರ ಈ ಚಿತ್ರದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಸಂಜಯ್ ದತ್ ಪತ್ನಿ ಮಾನ್ಯತಾ. ಈ ಸಿನೆಮಾದಲ್ಲಿ ತನ್ನನ್ನು ಹೇಗೆ ಚಿತ್ರೀಕರಿಸಲಾಗಿದೆ ಎಂಬ ಟೆನ್ಶನ್ ಮಾನ್ಯತಾಗೆ. ಯಾಕೆಂದರೆ, ಸಂಜಯ್ ಬದುಕಿನ ಚಿತ್ರದಲ್ಲಿ ತನ್ನನ್ನು ಹೇಗೆ ಚಿತ್ರೀಕರಿಸಲಾಗುತ್ತಿದೆ. ತನಗೆ ಎಷ್ಟು ಮಹತ್ವ ನೀಡಲಾಗಿದೆ ಎಂಬುದರ ಯಾವೊಂದು ಮಾಹಿತಿಯೂ ಮಾನ್ಯತಾಗೆ ಇಲ್ಲವಂತೆ. ನಿರ್ದೇಶಕ ರಾಜ್​ಕುಮಾರ್ ಇರಾನಿ ಕೂಡಾ ಮಾನ್ಯತಾಗೆ ಈ ಬಗ್ಗೆ ಯಾವುದೇ ಮಾಹಿತಿಯನ್ನೂ ಕೊಟ್ಟಿಲ್ಲ. ಹೀಗಾಗಿ, ಮಾನ್ಯತಾ ತಲೆಗೆ ಹುಳ ಬಿಟ್ಟುಕೊಂಡು ಕುಳಿತಿದ್ದಾರೆ. ಅಲ್ಲದೆ, ತನಗೆ ಗೊತ್ತಿರುವವರಿಗೆ ಎಲ್ಲರಿಗೂ ಕರೆ ಮಾಡುತ್ತಿದ್ದಾರಂತೆ. ಅದರಲ್ಲೂ ಸಂಜಯ್ ದತ್ ಪಾತ್ರ ಮಾಡುತ್ತಿರುವ ರಣಬೀರ್ ಕಪೂರ್​ಗೆ ಸ್ವಲ್ಪ ಹೆಚ್ಚೇ ಮಾನ್ಯತಾರಿಂದ ಕರೆಗಳು ಹೋಗುತ್ತಿವೆಯಂತೆ…!

ಸಂಜು ಚಿತ್ರದಲ್ಲಿ ಮಾನ್ಯತಾ ಪಾತ್ರ ಮಾಡುವವರು ಬಾಲಿವುಡ್ ನಟಿ ದಿಯಾ ಮಿರ್ಜಾ. ದಿಯಾ ಪಾತ್ರದಲ್ಲಿ ಬಗ್ಗೆ ಮೆಚ್ಚುಗೆ ಮಾತನ್ನೇ ಆಡಿದ್ದಾರೆ. ಮಾನ್ಯತಾ ಮತ್ತು ಸಂಜಯ್ ದತ್ 2008ರಲ್ಲಿ ಮದುವೆಯಾಗಿದ್ದರು. ಸಂಜಯ್ ಬದುಕಿನಲ್ಲಿ ಮಾನ್ಯತಾರ ಪಾತ್ರ ಬಹಳ ಹಿರಿದಾಗಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!