Wednesday , January 24 2018
Home / News NOW / ಗಲ್ಲು ಶಿಕ್ಷೆಯಿಂದ ಸೈನೈಡ್ ಮೋಹನ್ ಪಾರು : ಸಾಯುವವರೆಗೆ ಜೈಲು : ಹೈಕೋರ್ಟ್ ಆದೇಶ
Buy Bitcoin at CEX.IO

ಗಲ್ಲು ಶಿಕ್ಷೆಯಿಂದ ಸೈನೈಡ್ ಮೋಹನ್ ಪಾರು : ಸಾಯುವವರೆಗೆ ಜೈಲು : ಹೈಕೋರ್ಟ್ ಆದೇಶ

ಬೆಂಗಳೂರು : ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೈನೈಡ್ ಮೋಹನ್ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾನೆ. ಆದರೆ, ಈತ ಸಾಯುವ ವರೆಗೆ ಜೈಲಿನಲ್ಲೇ ಇರುವಂತೆ ಶಿಕ್ಷೆ ವಿಧಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ. ಈತ ಸಮಾಜಕ್ಕೆ ಮಾರಕ. ಹೀಗಾಗಿ, ಈತನಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಬಾರದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ನ್ಯಾ. ರವಿ ಮಳಿಮಠ್ ಮತ್ತು ನ್ಯಾ. ಜಾನ್ ಮೈಕಲ್ ಕುನ್ನಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಬಂಟ್ವಾಳ ತಾಲೂಕಿನ ಕೋಳಿಮನೆ ಗ್ರಾಮದ ಅನಿತಾ ಎಂಬುವವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನೈಡ್ ಮೋಹನ್ ಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ಗಲ್ಲು ಶಿಕ್ಷೆಯನ್ನು ರದ್ದು ಮಾಡಿರುವ ಹೈಕೋರ್ಟ್, ಈತನಿಗೆ ಸಾಯುವವರೆಗೆ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪಿತ್ತಿದೆ.

2009ರಲ್ಲಿ ಅನಿತಾ ಎಂಬುವವರು ಮದುವೆಯಾಗುವುದಾಗಿ ನಂಬಿಸಿ ಹಾಸನಕ್ಕೆ ಕರೆ ತಂದಿದ್ದ ಮೋಹನ್ ಬಳಿಕ ಅತ್ಯಾಚಾರ ಮಾಡಿದ್ದ. ಇದಾದ ಬಲಿಕ ಗರ್ಭ ನಿರೋಧಕ ಮಾತ್ರೆ ಎಂದು ಸೈನೈಡ್ ಲೇಪಿತ ಮಾತ್ರೆ ನೀಡಿದ್ದ. ಇದರಿಂದ ಅನಿತಾ ಹಾಸನದ ಬಸ್ ನಿಲ್ದಾಣದ ಶೌಚಾಲಯದಲ್ಲಿ ಕೊನೆಯುಸಿರೆಳೆದಿದ್ದರು. ಆದರೆ, ಈ ಮೋಹನ್ 2003 ರಿಂದ 2009ರ ನಡುವಿನಲ್ಲಿ ಇದೇ ರೀತಿಯ ಸುಮಾರು 20 ಅಪರಾಧ ಮಾಡಿದ್ದ . ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ವೇಣೂರು ಹಾಗೂ ಸುಳ್ಯ ಸೇರಿದಂತೆ ಹಲವು ಕಡೆ ಈತ ಪಾಪಕೃತ್ಯವೆಸಗಿದ್ದ. ಇವುಗಳಲ್ಲಿ 4 ಪ್ರಕರಣಗಳಲ್ಲಿ ಜೀವಾವಧಿ ಮತ್ತು 3 ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೊಳಗಾಗಿದ್ದ. ಇದರಲ್ಲಿ ಅನಿತಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಮೋಹನ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!