Thursday , December 14 2017
Home / Multiplex / Tollywood / ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ಚಿತ್ರ ಇದು

ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿರುವ ಚಿತ್ರ ಇದು

ಹೈದರಾಬಾದ್ : ಬಾಹುಬಲಿ ಸರಣಿಯ ಬಳಿಕ ನಟಿ ಅನುಷ್ಕಾ ಶೆಟ್ಟಿ ಏನು ಮಾಡುತ್ತಿದ್ದಾರೆ…? ಇಂತಹದ್ದೊಂದು ಪ್ರಶ್ನೆ ಹಲವರನ್ನು ಕಾಡಿತ್ತು. ಇದಕ್ಕೆ ಸರಿಯಾಗಿ ಬಾಹುಬಲಿ ಬಳಿಕ ಅನುಷ್ಕಾ ಯಾವೊಂದು ಹೊಸ ಚಿತ್ರಗಳನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ, ಅನುಷ್ಕಾ ಸದ್ದಿಲ್ಲದೆ ಈಗ ಒಂದು ಚಿತ್ರವನ್ನು ಮುಗಿಸಿದ್ದಾರೆ. ಭಾಗಮತಿ ಎಂಬ ಟೈಟಲ್ನ ಚಿತ್ರ ಅದು. ಬಹಳ ಹಿಂದೆಯೇ ಶುರು ಮಾಡಿದ್ದ ಈ ಚಿತ್ರ ಈಗ ಪೂರ್ಣಗೊಂಡಿದೆ.

ಭಾಗಮತಿ ಚಿತ್ರದ ಶೂಟಿಂಗ್ ಮುಗಿಸಿರುವ ಅನುಷ್ಕಾ ಈಗ ಹೊಸ ಚಿತ್ರಗಳನ್ನು ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಒಂದಷ್ಟು ಚಿಕಿತ್ಸೆಗಳನ್ನೂ ಅನುಷ್ಕಾ ಪಡೆಯುತ್ತಿದ್ದಾರಂತೆ. ಇನ್ನು, ವಿಕ್ಟರಿ ವೆಂಕಟೇಶ್ ನಾಯಕತ್ವದ ತೇಜಾ ನಿರ್ದೇಶನದ ಚಿತ್ರವನ್ನೂ ಅನುಷ್ಕಾ ಒಪ್ಪಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ರೊಮ್ಯಾಂಟಿಕ್ ಎಂಟಟೈನರ್ ಅಂತೆ. ವೆಂಕಟೇಶ್ ಈ ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಹಿಂದೆ ವೆಂಕಟೇಶ್ ಮತ್ತು ಅನುಷ್ಕಾ ‘ಚಿಂತಾಕಯಾಲ’ ಮತ್ತು ‘ನಾಗವಲ್ಲಿ’ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ, ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತ್ತು.

About sudina

Check Also

ಮತ್ತೊಮ್ಮೆ ತಂದೆಯಾದ ಪವನ್ ಕಲ್ಯಾಣ್​ : ಮೂರನೇ ಪತ್ನಿಗೆ ಎರಡನೇ ಮಗು ಜನನ…

ಹೈದರಾಬಾದ್​ : ಟಾಲಿವುಡ್​ನ ಪವರ್​​ಸ್ಟಾರ್​​​ ಟಾಲಿವುಡ್​​ ಪವನ್ ಕಲ್ಯಾಣ್​ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ… ಪವನ್​ ಮೂರನೇ ಹೆಂಡ್ತಿ ತಾಯಿಯಾಗಿದ್ದಾರೆ… …

Leave a Reply

Your email address will not be published. Required fields are marked *

error: Content is protected !!