Friday , February 23 2018
Home / News NOW / ನಿಯಂತ್ರಣಕ್ಕೆ ಬಾರದ ಕಾಲ್ಗಿಚ್ಚು : 31 ಮಂದಿ ಸಾವು : ನೂರಾರು ಜನ ನಾಪತ್ತೆ

ನಿಯಂತ್ರಣಕ್ಕೆ ಬಾರದ ಕಾಲ್ಗಿಚ್ಚು : 31 ಮಂದಿ ಸಾವು : ನೂರಾರು ಜನ ನಾಪತ್ತೆ

ಸೊನೋಮಾ : ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಲ್ಗಿಚ್ಚು ಭೀತಿ ಮೂಡಿಸಿದೆ. ನಾಲ್ಕು ದಿನಗಳಿಂದ ಇಲ್ಲಿ ಕಾಲ್ಗಿಚ್ಚು ರುದ್ರನರ್ತನ ಮಾಡುತ್ತಿದ್ದು, ನಿಯಂತ್ರಣಕ್ಕೇ ಬರುತ್ತಿಲ್ಲ. ಕಳೆದ 84 ವರ್ಷದಲ್ಲೇ ಇದೊಂದು ಅತ್ಯಂತ ಘೋರ ಕಾಲ್ಗಿಚ್ಚು ಎಂದು ವಿಶ್ಲೇಷಿಸಲಾಗಿದ್ದು, ಈ ಕಾಲ್ಗಿಚ್ಚಿಗೆ ಇದುವರೆಗೆ 31 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾಗಿ ಕ್ಯಾಲಿಫೋರ್ನಿಯಾದ ಮಾಧ್ಯಮಗಳು ವರದಿ ಮಾಡಿವೆ. ಇನ್ನು, ನೂರಾರು ಜನ ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯೂ ಇದೆ. ಕಾಡಿನಂಚಿನಲ್ಲಿ ವಾಸವಾಗಿರುವ ಜನರನ್ನು ಈಗ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಇಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಗಟ್ಟಲೆ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಆದರೂ, ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. 1933ರಲ್ಲಿ ಲಾಸ್​ ಏಂಜಲ್ಸ್​​ನ ಗ್ರೀಫೀತ್​​ ಪಾರ್ಕ್​ನಲ್ಲಿ ನಡೆದಿದ್ದ ಕಾಲ್ಗಿಚ್ಚೇ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಘೋರ ಕಾಲ್ಗಿಚ್ಚು ಎಂದು ಹೇಳಲಾಗಿತ್ತು. ಆದರೆ, ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆಗೆ ಹೋಲಿಸಿದರೆ ಈಗ ಸಂಭವಿಸಿದ ಕಾಲ್ಗಿಚ್ಚಿನಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ.

About sudina

Check Also

ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಇನ್ನಿಲ್ಲ

ಮಂಡ್ಯ : ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಪುಟ್ಟಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆ …

Leave a Reply

Your email address will not be published. Required fields are marked *

error: Content is protected !!