Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Tollywood / ರಾಜಮೌಳಿ ಮುಂದಿನ ಪ್ರಾಜೆಕ್ಟ್​ ತುಂಬಾ ಸಿಂಪಲ್​…!

ರಾಜಮೌಳಿ ಮುಂದಿನ ಪ್ರಾಜೆಕ್ಟ್​ ತುಂಬಾ ಸಿಂಪಲ್​…!

ಹೈದರಾಬಾದ್​ : ಬಾಹುಬಲಿ ನಿರ್ದೇಶಕ ರಾಜಮೌಳಿ ಈಗ ತಮ್ಮ ಮುಂದಿನ ಪ್ರಾಜೆಕ್ಟ್​ನಲ್ಲಿ ತೊಡಗಿದ್ದಾರೆ. ರಾಜಮೌಳಿ ನೆಕ್ಸ್ಟ್​ ಪ್ರಾಜೆಕ್ಟ್​ ಒಂದು ಸೋಷಿಯಲ್ ಡ್ರಾಮಾವಂತೆ. ಈ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದಿನ್ನೂ ಅಂತಿಮವಾಗಿಲ್ಲ. ಆದರೆ. ತುಂಬಾ ವಿಭಿನ್ನ ಚಿತ್ರವೊಂದನ್ನು ಮಾಡುವುದಕ್ಕೆ ರಾಜಮೌಳಿ ಈಗ ಮನಸ್ಸು ಮಾಡಿದ್ದಾರೆ. ಸ್ಟಾರ್​ ಡೈರೆಕ್ಟರ್​ ತಲೆಯಲ್ಲಿ ಈ ಕುರಿತ ಹಲವು ಯೋಚನೆಗಳು ಸುಳಿದಾಡುತ್ತಿವೆ…

ಎಸ್​.ಎಸ್​.ರಾಜಮೌಳಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ… ಬಾಹುಬಲಿ ಚಿತ್ರದ ಮೂಲಕ ರಾಜಮೌಳಿ ವಿಶ್ವದ ಗಮನ ಸೆಳೆದವರು… ರಾಜಮೌಳಿ ಬತ್ತಳಿಕೆಯಿಂದ ಬಂದಂತಹ ಒಂದೊಂದು ಚಿತ್ರಗಳು ಒಂದೊಂದು ಮುತ್ತುಗಳಿದ್ದಂತೆ. ವಿಭಿನ್ನ ಮತ್ತು ಸೂಪರ್​ಹಿಟ್​ ಚಿತ್ರಗಳನ್ನು ನೀಡಿದವರು ರಾಜಮೌಳಿ. ರಾಜಮೌಳಿ ಚಿತ್ರ ಯಾವತ್ತೂ ನಿರ್ಮಾಪಕರಿಗೆ ಮೋಸ ಮಾಡಿಲ್ಲ. ಟಾಲಿವುಡ್​​ನಲ್ಲಿ ಹಲವು ಸೂಪರ್​ ಹಿಟ್​ ಚಿತ್ರಗಳನ್ನು ನೀಡಿರುವ ರಾಜಮೌಳಿ ನಿರ್ದೇಶಕರಾಗಿ ಎಷ್ಟು ಖ್ಯಾತರೋ ಸರಳ ಜೀವನಕ್ಕೂ ಇವರು ಅಷ್ಟೇ ಫೇಮಸ್​​​.. ಸಿಂಪ್ಲಿಸಿಟಿಗೆ ಮತ್ತೊಂದು ಹೆಸರೇ ರಾಜಮೌಳಿ… ಸಖತ್​ ಡೌನ್​ ಟು ಅರ್ಥ್​ ಮನುಷ್ಯ ಇವರು… ರಾಜಮೌಳಿ ಚಿತ್ರಗಳಲ್ಲಿ ಅದ್ಧೂರಿತನ ಇದ್ದರೂ ನಿಜ ಜೀವನದಲ್ಲಿ ಇವರು ಸಖತ್​ ಸಿಂಪಲ್​… ಈಗ ಇದೇ ಸಿಂಪಲ್ ಸಿದ್ಧಾಂತವನ್ನು ರಾಜಮೌಳಿ ತಮ್ಮ ಸಿನೆಮಾದಲ್ಲೂ ಅಳವಡಿಸೋದಕ್ಕೆ ಸಜ್ಜಾಗಿದ್ದಾರೆ.

ಬಾಹುಬಲಿ ಸರಣಿ ಬಳಿಕ ರಾಜಮೌಳಿ ಚಿತ್ರ ಯಾವುದು ಎಂಬ ಕುತೂಹಲ ಎಲ್ಲರನ್ನೂ ಕಾಡಿದ್ದಂತೂ ಸತ್ಯ… ಯಾಕೆಂದರೆ, ರಾಜಮೌಳಿ ಭಾರತ ಸಿನೆಮಾದ ಗ್ರೇಟ್​ ಡೈರೆಕ್ಟರ್​ಗಳಲ್ಲಿ ಒಬ್ಬರು. ಈಗ, ಬಾಹುಬಲಿ ಹೀಗೆ ಡಿಫ್ರೆಂಟ್ ಚಿತ್ರಗಳ ಮೂಲಕ ಸಿನಿಮಾ ಲೋಕದ ಬೌಂಡರಿಗಳನ್ನು ದಾಟಿದವರು ಇವರು. ಹೀಗಾಗಿಯೇ, ರಾಜಮೌಳಿ ಚಿತ್ರ ಅಂದರೆ ಜನ ಕಾಯುತ್ತಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ರಾಜಮೌಳಿ ಮಹಾಭಾರತವನ್ನು ಸಿನೆಮಾ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಈಗ ಇಲ್ಲಿ ಬೇರೆಯದ್ದೇ ಮಾತುಗಳು ಕೇಳುವುದಕ್ಕೆ ಆರಂಭಿಸಿವೆ.

ಈ ಮಗಧೀರ ನಿರ್ದೇಶಕ ಸೋಷಿಯಲ್​ ಡ್ರಾಮಾವೊಂದನ್ನು ತಮ್ಮ ಮುಂದಿನ ಪ್ರಾಜೆಕ್ಟ್​ಗೆ ಕೈ ಗೆತ್ತಿಕೊಂಡಿದ್ದಾರಂತೆ. ಈ ಬಗ್ಗೆ ರಾಜಮೌಳಿ ಈ ಹಿಂದೆಯೇ ಸುಳಿವು ನೀಡಿದ್ದರು. ತಮ್ಮ ಮುಂದಿನ ಚಿತ್ರ ಸಖತ್​ ಇಮೋಷನಲ್​ ನರೇಷನ್ ಇರುವ ಚಿತ್ರವಾಗಲಿದೆ. ಅದರಲ್ಲಿ ಈ ಹಿಂದಿನ ಚಿತ್ರಗಳಂತೆ ತುಂಬಾ ಗ್ರಾಫಿಕ್ಸ್ ಕೂಡಾ ಇರೋದಿಲ್ಲ ಎಂದು ರಾಜಮೌಳಿ ತುಂಬಾ ದಿನಗಳ ಹಿಂದೆಯೇ ಹೇಳಿಕೊಂಡಿದ್ದರು. ಇದೀಗ ನಿಜವಾಗುವ ಲಕ್ಷಣಗಳು ಕಾಣುತ್ತಿವೆ.

ಸದ್ಯ ರಾಜಮೌಳಿ ಮನಸ್ಸಿನಲ್ಲಿ ಒಂದು ಪ್ರಾಜೆಕ್ಟ್​ ಸಿದ್ಧವಾಗುತ್ತಿದೆ. ಅದು ಯಾವ ಭಾಷೆಯಲ್ಲಿ ಸಿದ್ಧ ಮಾಡಬೇಕು ಮತ್ತು ಈ ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲವಂತೆ. ಆದರೆ, ರಾಜಮೌಳಿ ತುಂಬಾ ಸಿಂಪಲ್ ಆಗಿರುವಂತಹ ಚಿತ್ರ ಮಾಡುವುದು ಸತ್ಯ. ಈ ಮಧ್ಯೆ ಟಾಲಿವುಡ್​ನ ಸೂಪರ್​ಸ್ಟಾರ್ ಮಹೇಶ್ ಬಾಬು ಜೊತೆಗಿನ ಪ್ರಾಜೆಕ್ಟ್ ಕೂಡಾ ರಾಜಮೌಳಿ ಕೈಯಲ್ಲಿ ಇದೆ. ಈ ತೆಲುಗು ಸಿನೆಮಾ 2019ರ ವೇಳೆಗೆ ರಿಲೀಸ್​ ಆಗುವ ಸಾಧ್ಯತೆ ಇದೆ. ಅದೇನೇ ಆದರೂ ರಾಜಮೌಳಿ ತಮ್ಮ ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ಮಾತನಾಡಿದರೂ ಪ್ರಶ್ನೆಗಳು ಮಾತ್ರ ಹಾಗೆಯೇ ಇದೆ. ಯಾಕೆಂದರೆ, ನಿಜವಾಗಿಯೂ ರಾಜಮೌಳಿ ತಲೆಯಲ್ಲಿ ಸುಳಿದಾಡುತ್ತಿರುವ ಯೋಚನೆಗಳು ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇನ್ನೂ ಒಂದಷ್ಟು ದಿನ ಕಾಯಬೇಕಾಗಿದೆ…

About sudina

Check Also

ಮತ್ತೊಮ್ಮೆ ತಂದೆಯಾದ ಪವನ್ ಕಲ್ಯಾಣ್​ : ಮೂರನೇ ಪತ್ನಿಗೆ ಎರಡನೇ ಮಗು ಜನನ…

ಹೈದರಾಬಾದ್​ : ಟಾಲಿವುಡ್​ನ ಪವರ್​​ಸ್ಟಾರ್​​​ ಟಾಲಿವುಡ್​​ ಪವನ್ ಕಲ್ಯಾಣ್​ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ… ಪವನ್​ ಮೂರನೇ ಹೆಂಡ್ತಿ ತಾಯಿಯಾಗಿದ್ದಾರೆ… …

Leave a Reply

Your email address will not be published. Required fields are marked *

error: Content is protected !!