Friday , April 20 2018
Home / Sandalwood / ಬಿಗ್​ಬಾಸ್​ ಬಗ್ಗೆ ವೈರಲ್ ಆದ ವೀಡಿಯೋ : ಸ್ಪಷ್ಟನೆ ನೀಡಿದ್ದಾರೆ ಪರಮೇಶ್ವರ್ ಗುಂಡ್ಕಲ್​

ಬಿಗ್​ಬಾಸ್​ ಬಗ್ಗೆ ವೈರಲ್ ಆದ ವೀಡಿಯೋ : ಸ್ಪಷ್ಟನೆ ನೀಡಿದ್ದಾರೆ ಪರಮೇಶ್ವರ್ ಗುಂಡ್ಕಲ್​

ಬೆಂಗಳೂರು : ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಮತ್ತು ನಟಿ ಮಾಳವಿಕಾ ಅವರ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಬಿಗ್​ಬಾಸ್​ ಸೀಸನ್​ 4 ರಲ್ಲಿ ನಟಿ ಮಾಳವಿಕಾ ಸೀಕ್ರೆಟ್​ ರೂಮ್​ಗೆ ಹೋಗುವ ಸಂದರ್ಭದ ಈ ವೀಡಿಯೋದಲ್ಲಿ ಪರಮೇಶ್ವರ್​ ಗುಂಡ್ಕಲ್​ ಕೂಡಾ ಕಾಣಿಸಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿ ವಿವಾದದ ರೂಪ ತಾಳಿತ್ತು. ಆದರೆ, ಈಗ ಈ ವೀಡಿಯೋ ಬಗ್ಗೆ ಬಿಗ್​ಬಾಸ್​ ನಿರ್ದೇಶಕರೂ ಆದ ಪರಮೇಶ್ವರ್​ ಗುಂಡ್ಕಲ್​ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಗುಂಡ್ಕಲ್​ ಹೇಳಿದ್ದಿಷ್ಟು : ಬಿಗ್​ಬಾಸ್​ ನಿರ್ದೇಶಕನಾಗಿ ಸ್ಪರ್ಧಿಗಳು ಸೀಕ್ರೆಟ್​ ರೂಮ್​ಗೆ ಹೋಗುವ ಸಂದರ್ಭದಲ್ಲಿ ಹಾಜರಿರಬೇಕಾಗಿದ್ದು ನನ್ನ ಜವಾಬ್ದಾರಿ. ಈ ಹಿಂದಿನ ಸೀಸನ್​ನಲ್ಲೂ ಸ್ಪರ್ಧಿಗಳನ್ನು ಸೀಕ್ರೆಟ್​ ರೂಮ್​ಗೆ ಬಿಡುವಾಗ ನಾನು ಇರುತ್ತಿದ್ದೆ. ಇಲ್ಲೂ ಅದೇ ಆಗಿದೆ. ಬಿಗ್​ಬಾಸ್​ ಮನೆಯಿಂದ ಸೀಕ್ರೆಟ್​ ರೂಮ್​ಗೆ ಸ್ಪರ್ಧಿಗಳು ಹೋಗುವ ಸಂದರ್ಭದಲ್ಲಿ ಅವರಿಗೆ ಒಂದಷ್ಟು ವಿಷಯಗಳನ್ನು ಮುಟ್ಟಿಸಬೇಕಾಗುತ್ತದೆ. ಬೇರೆ ಯಾರಾದರೂ ಈ ವಿಷಯ ಸ್ಪರ್ಧಿಗಳಿಗೆ ತಿಳಿಸಿದರೆ ಅದು ಲೀಕ್ ಆಗುವಂತಹ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ, ಗೌಪ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಸಂದರ್ಭದಲ್ಲಿ ನಾನು ಹಾಜರಿರುತ್ತೇನೆ. ಆದರೆ, ಅಲ್ಲಿ ಕ್ಯಾಮೆರಾಗಳೆಲ್ಲಾ ಇರುವುದರಿಂದ ಜೋರಾಗಿ ಮಾತನಾಡುವ ಹಾಗೂ ಇರುವುದಿಲ್ಲ. ನನ್ನ ಬಳಿ ಮೈಕ್ ಕೂಡಾ ಇರಲಿಲ್ಲ. ಹೀಗಾಗಿ, ವೀಡಿಯೋದಲ್ಲಿ ನನ್ನ ಮಾತು ಗುಸುಗುಸು ಎಂಬಂತೆ ಕೇಳಿಸಿರಬಹುದು. ಅದು ಬಿಟ್ಟರೆ ಅಲ್ಲಿ ಏನೂ ನಡೆದಿಲ್ಲ. ಹಾಗೊಂದು ವೇಳೆ, ಮಾಳವಿಕಾಗೆ ನಾನು ಬೆಂಬಲ ನೀಡಿದ್ದರೆ ಅವರು ಬಿಗ್​ ಬಾಸ್​​ನಲ್ಲಿ ಗೆಲ್ಲಬೇಕಾಗಿತ್ತು. ಅವರು ಈ ಸೀಸನ್​​ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಅವರಿಗೆ ಸಿಕ್ಕ ವೋಟ್​ನ ಪ್ರಕಾರವಾಗಿಯೇ ಅವರು ಎಲಿಮಿನೇಟ್ ಆಗಿದ್ದರು ಅಷ್ಟೇ. ಎಂದು ಪರಮೇಶ್ವರ್ ಗುಂಡ್ಕಲ್​ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ನು, ಇದನ್ನು ಸುಖಾಸುಮ್ಮನೆ ವಿವಾದ ಮಾಡಲಾಗಿದೆ. ಪರಮೇಶ್ವರ್ ಗುಂಡ್ಕಲ್ ಮತ್ತು ಮಾಳವಿಕಾ ಯಾವುದೇ ತಪ್ಪು ಮಾಡಿಲ್ಲ ಎಂದು ಈ ಶೋನ ನಿರೂಪಕ ಮತ್ತು ಖ್ಯಾತ ನಟ ಸುದೀಪ್ ಅವರೂ ಹೇಳಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!