Tuesday , August 14 2018
ಕೇಳ್ರಪ್ಪೋ ಕೇಳಿ
Home / News NOW / ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್​ ಬೇಗ್​ ಕೀಳುಮಟ್ಟದ ಪದ ಪ್ರಯೋಗ : ಬಿಜೆಪಿ ಆಕ್ರೋಶ

ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್​ ಬೇಗ್​ ಕೀಳುಮಟ್ಟದ ಪದ ಪ್ರಯೋಗ : ಬಿಜೆಪಿ ಆಕ್ರೋಶ

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಸಚಿವ ರೋಷನ್ ಬೇಗ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಕೀಳುಮಟ್ಟದ ಪದಗಳನ್ನು ಬಳಕೆ ಮಾಡಿ ರೋಷನ್ ಬೇಗ್ ಪ್ರಧಾನಿ ಅವರನ್ನು ಟೀಕಿಸಿದ್ದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಸಚಿವ ಬೇಗ್ ಅವರನ್ನು ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಪುಲಿಕೇಶಿನಗರದಲ್ಲಿ ಕಾಂಗ್ರೆಸ್​​ ಸಭೆಯಲ್ಲಿ ತಮಿಳಿನಲ್ಲಿ ಭಾಷಣ ಮಾಡುತ್ತಾ ಸಚಿವ ರೋಷನ್ ಬೇಗ್ ಅವಾಚ್ಯ ಶಬ್ದಗಳನ್ನು ಪ್ರಧಾನಿ ವಿರುದ್ಧ ಪ್ರಯೋಗ ಮಾಡಿದ್ದಾರೆ. ನೋಟು ನಿಷೇಧವನ್ನು ಟೀಕಿಸುವ ವೇಳೆ ಸಚಿವರು ಈ ಯಡವಟ್ಟು ಮಾಡಿಕೊಂಡಿದ್ದಾರೆ.

About sudina

Check Also

ಶಾರ್ಜಾ ಏರ್ ಪೋರ್ಟ್‍ನಲ್ಲಿ ಮಹಿಳೆಯರಿಗಾಗಿ ಪಿಂಕ್ ಪಾರ್ಕಿಂಗ್ ಪ್ಲೇಸ್…

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ : ಮಹಿಳೆಯರ ರಕ್ಷಣೆ ಮತ್ತು ಗುಣಮಟ್ಟದ ಸೇವೆ ಒದಗಿಸುವ ಸಲುವಾಗಿ ಶಾರ್ಜಾ …

Leave a Reply

Your email address will not be published. Required fields are marked *

error: Content is protected !!