Thursday , December 14 2017
Home / Sandalwood / ಹೊಸ ಆಡಿಯೋ ಕಂಪೆನಿ ಹುಟ್ಟು ಹಾಕಲಿರುವ ಪವರ್ ಸ್ಟಾರ್

ಹೊಸ ಆಡಿಯೋ ಕಂಪೆನಿ ಹುಟ್ಟು ಹಾಕಲಿರುವ ಪವರ್ ಸ್ಟಾರ್

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​​ ಈಗ ನಟನೆಯ ಜೊತೆ ಜೊತೆ ಹೊಸ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ತಾಯಿ ಪಾರ್ವತಮ್ಮ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಪಿಆರ್​​ಕೆ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿರುವ ಪುನೀತ್ ರಾಜ್​ಕುಮಾರ್​, ಈಗ ತಂದೆಯ ಹೆಸರಿನಲ್ಲಿ ಆಡಿಯೋ ಕಂಪೆನಿಯೊಂದನ್ನು ಆರಂಭಿಸಲು ಚಿಂತನೆ ನಡೆಸಿದ್ದಾರೆ.

ಪಿಆರ್​​ಕೆ ನಿರ್ಮಾಣ ಸಂಸ್ಥೆಯಲ್ಲಿ ಈಗಾಗಲೇ ಎರಡು ಹೊಸ ಚಿತ್ರಗಳು ಸಿದ್ಧವಾಗುತ್ತಿದೆ. ಹೊಸಬರಿಗೆ ಅವಕಾಶ ನೀಡುವ ಸಲುವಾಗಿಯೇ ಈ ಸಂಸ್ಥೆ ಹುಟ್ಟಿಕೊಂಡಿದೆ. ಈಗ ಇದೇ ಪುನೀತ್ ಅವರು ಇನ್ನಷ್ಟು ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಮ್ಯೂಸಿಕ್ ಕಂಪೆನಿ ಆರಂಭಿಸುವ ಯೋಚನೆಯಲ್ಲಿದ್ದಾರೆ. ಇದಕ್ಕೆ ‘ರಾಜ್ ಕುಮಾರ್ ಮ್ಯೂಸಿಕ್’ ಸಂಸ್ಥೆ  ಎಂದು ಹೆಸರಿಡಲು ನಿರ್ಧರಿಸಿದ್ದಾರಂತೆ ಅಪ್ಪು. ಸದ್ಯ ಪುನೀತ್ ರಾಜ್​ಕುಮಾರ್ ಅವರು ಅಭಿನಯಿಸುತ್ತಿರುವ ‘ಅಂಜನಿಪುತ್ರ’ ಚಿತ್ರದ ಮೂಲಕವೇ ‘ರಾಜ್ ಕುಮಾರ್ ಮ್ಯೂಸಿಕ್’ ಕಂಪನಿ ಸ್ಯಾಂಡಲ್ ವುಡ್ ನಲ್ಲಿ ಕಾರ್ಯಾರಂಭ ಮಾಡಲಿದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!