Saturday , February 16 2019
ಕೇಳ್ರಪ್ಪೋ ಕೇಳಿ
Home / Interval / ಈ ಚಿತ್ರಕ್ಕೆ ರಜನಿಕಾಂತ್ ಪಡೆದದ್ದು ಕೇವಲ 2 ರೂಪಾಯಿ ಸಂಭಾವನೆ…!

ಈ ಚಿತ್ರಕ್ಕೆ ರಜನಿಕಾಂತ್ ಪಡೆದದ್ದು ಕೇವಲ 2 ರೂಪಾಯಿ ಸಂಭಾವನೆ…!

ಚೆನ್ನೈ : ಸೂಪರ್​ ಸ್ಟಾರ್​ ರಜನಿಕಾಂತ್​​ ಸಿಂಪ್ಲಿ ಸಿಟಿಗೆ ಫೇಮಸ್. ಸರಳತೆಯೇ ರಜನಿಗೆ ಇರುವ ಭೂಷಣ. ಖ್ಯಾತಿಯ ಉತ್ತುಂಗಕ್ಕೇರಿದರೂ ನಡೆದು ಬಂದ ಹಾದಿಯನ್ನು ಎಂದೂ ಮರೆತವರಲ್ಲ ರಜನಿಕಾಂತ್​. ಇಂತಹ ರಜನಿಕಾಂತ್ ಅವರ ಬಗೆಗಿನ ಅಪರೂಪದ ಮಾಹಿತಿಯನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಭಾರತಿರಾಜ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಭಾರತೀರಾಜ ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್. ಇವರ ‘ಪದಿನಾರ್ ವಯದಿನೆಲೆ’ ಸಿನೆಮಾದಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಈ ಚಿತ್ರ ರಜನಿಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಹೀಗೆ ಹಲವು ಸೂಪರ್​ ಹಿಟ್​ ಚಿತ್ರಗಳನ್ನು ಕೊಡುತ್ತಾ ಬಂದ ರಜನಿಕಾಂತ್​ 80 – 90 ರ ದಶಕದಲ್ಲಿ ತಮಿಳು ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮರೆದಿದ್ದರು. ಈಗಲೂ ರಜನಿ ಇದೇ ಸ್ಥಾನದಲ್ಲಿದ್ದಾರೆ ಎಂಬುದು ಕೂಡಾ ನಿಜ. ಹೀಗೆ, ರಜನಿ ಖ್ಯಾತಿಯ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ಒಂದು ಸಲ ಭಾರತೀರಾಜ ಬ್ಯಾನರ್​ನಲ್ಲಿ ಜಿ.ಎಂ.ಕುಮಾರ್​​ ರಜನಿ ಅವರನ್ನು ಹಾಕಿಕೊಂಡು ಚಿತ್ರವನ್ನು ಮಾಡಲು ಬಯಸಿದ್ದರು. ಆದರೆ, ಭಾರತೀರಾಜ ನಿರ್ದೇಶನ ಮಾಡಿದರೆ ಮಾತ್ರ ತಾನು ಈ ಚಿತ್ರದಲ್ಲಿ ನಟಿಸುವುದಾಗಿ ರಜನಿ ಹೇಳಿದರು. ಜೊತೆಗೆ, ಈ ಚಿತ್ರಕ್ಕೆ ತಾನು ಬರೀ 2 ರೂಪಾಯಿ ಮಾತ್ರ ಸಂಭಾವನೆ ಪಡೆಯುತ್ತೇನೆ ಎಂದೂ ತಿಳಿಸಿದರು…!

ಅದು ರಜನಿಕಾಂತ್ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದ ಸಮಯ. ರಜನಿಗೆ ಕೊಡುತ್ತಿದ್ದ ಅಡ್ವಾನ್ಸ್​ ಹಣವೇ ಲಕ್ಷದ ಮೊತ್ತದಲ್ಲಿ ಇರುತ್ತಿತ್ತು. ಆದರೆ, ರಜನಿಕಾಂತ್​​ ಭಾರತೀರಾಜರನ್ನು ಎಂದೂ ಮರೆಯುವವರಲ್ಲ. ಹೀಗಾಗಿ, ಭಾರತೀರಾಜರಿಗಾಗಿ ಈ ಚಿತ್ರವನ್ನು ಒಪ್ಪಿಕೊಂಡ ರಜನಿಕಾಂತ್​ ಬರೀ 2 ರೂಪಾಯಿ ಸಂಭಾವನೆಯಲ್ಲಿ ಇಡೀ ಚಿತ್ರವನ್ನು ಮುಗಿಸಿಕೊಟ್ಟಿದ್ದರು…! ಅಂದು ರಜನಿ ಅಭಿನಯಿಸಿದ ಆ ಚಿತ್ರವೇ ‘ಕೋಡಿ ಪರಕ್ಕುದು’.

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!