Saturday , January 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ಶೂಟಿಂಗ್ ಟೈಮ್​​ನಲ್ಲಿ ರಣವೀರ್ ಗಾಯ ಮಾಡಿಕೊಂಡರೆ ಸಿನೆಮಾ ಹಿಟ್ ಆಗುತ್ತಂತೆ…!

ಶೂಟಿಂಗ್ ಟೈಮ್​​ನಲ್ಲಿ ರಣವೀರ್ ಗಾಯ ಮಾಡಿಕೊಂಡರೆ ಸಿನೆಮಾ ಹಿಟ್ ಆಗುತ್ತಂತೆ…!

ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಬಣ್ಣದ ಲೋಕದಲ್ಲಿ ತಮ್ಮ ಪ್ರತಿಭೆಯ ಮೂಲಕವೇ ಹೆಸರು ಮಾಡಿದವರು. ಸದ್ಯ ರಣವೀರ್​​ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಿಂಗ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅಲ್ಲದೆ, ಶೂಟಿಂಗ್ ಟೈಮ್​ನಲ್ಲಿ ಗಾಯ ಕೂಡಾ ಮಾಡಿಕೊಂಡಿದ್ದಾರೆ. ಫೈಟ್​ ಸೀನ್​​​​ನ ಶೂಟಿಂಗ್ ವೇಳೆ ರಣವೀರ್​ಗೆ ಗಾಯಗಳಾಗಿತ್ತು. ಆದರೆ, ರಣವೀರ್ ಗಾಯಗೊಂಡಿರುವುದು ಸಿನಿಮಾ ನಿರ್ಮಾತೃಗಳಿಗೆ ಶುಭ ಸುದ್ದಿಯಾಗಿದೆಯಂತೆ…!

ಹೌದು ಇದು ನಿಜ. ರಣವೀರ್ ಮತ್ತು ಅವರ ಸ್ನೇಹಿತರ ಮಧ್ಯೆದಲ್ಲಿ ಒಂದು ಬಲವಾದ ನಂಬಿಕೆ ಇದೆ. ಯಾವ ಚಿತ್ರದ ಶೂಟಿಂಗ್ ಟೈಮ್​ನಲ್ಲಿ ರಣವೀರ್ ಗಾಯ ಮಾಡಿಕೊಳ್ಳುತ್ತಾರೋ ಆ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್ ಹಿಟ್​ ಆಗುತ್ತದೆಯಂತೆ…!

ಬನ್ಸಾಲಿ ಅವರೊಂದಿಗೆ ರಣವೀರ್ ಕೆಲಸ ಮಾಡುತ್ತಿರುವ ಮೂರನೇ ಚಿತ್ರ ಇದು. ಇದರಲ್ಲಿ ಎರಡು ಚಿತ್ರಗಳು ಸೂಪರ್ ಡೂಪರ್ ಹಿಟ್​ ಆಗಿದೆ. ಮೂರನೇ ಚಿತ್ರವೇ ಪದ್ಮಾವತಿ. ಈ ಹಿಂದಿನ ರಾಮಲೀಲಾ ಮತ್ತು ಬಾಜಿರಾವ್​ ಮಸ್ತಾಜಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ರಣವೀರ್ ಗಾಯ ಮಾಡಿಕೊಂಡಿದ್ದರು. ಈ ಎರಡೂ ಚಿತ್ರಗಳು ಸಖತ್​ ಹಿಟ್ ಆಗಿತ್ತು. ಇದೀಗ, ಪದ್ಮಾವತಿಯ ಶೂಟಿಂಗ್ ಟೈಮ್​ನಲ್ಲೂ ರಣವೀರ್ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ, ಈ ಚಿತ್ರವೂ ಹಿಟ್ ಎಂದೇ ರಣವೀರ್ ಸ್ನೇಹಿತರು ಮತ್ತು ಚಿತ್ರ ನಿರ್ಮಾತೃಗಳು ಮಾತನಾಡಿಕೊಳ್ಳುತ್ತಿದ್ದಾರಂತೆ…! ಇನ್ನೇನು ಈ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್ 1 ಕ್ಕೆ ಪದ್ಮಾವತಿ ವಿಶ್ವದಾದ್ಯಂತ ತೆರೆ ಕಾಣಲಿದೆ. ಹೀಗಾಗಿ, ರಣವೀರ್ ಗಾಯದ ಎಫೆಕ್ಟ್​ ಯಾವ ರೀತಿ ಇರಲಿದೆ ಎಂಬುದಕ್ಕೆ ನಾವು ಅಲ್ಲಿ ತನಕ ಕಾಯಲೇಬೇಕಾಗಿದೆ…!

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!