Sunday , May 20 2018
Home / News NOW / ಆದೇಶ ಬದಲಾವಣೆ ಸಾಧ್ಯವಿಲ್ಲ : ಪಟಾಕಿ ನಿಷೇಧಕ್ಕೆ ಕೋಮುಬಣ್ಣ ಕೂಡಾ ಬೇಡ : ಸುಪ್ರೀಂಕೋರ್ಟ್

ಆದೇಶ ಬದಲಾವಣೆ ಸಾಧ್ಯವಿಲ್ಲ : ಪಟಾಕಿ ನಿಷೇಧಕ್ಕೆ ಕೋಮುಬಣ್ಣ ಕೂಡಾ ಬೇಡ : ಸುಪ್ರೀಂಕೋರ್ಟ್

ನವದೆಹಲಿ : ಪರಿಸರ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ದೀಪಾವಳಿ ಪಟಾಕಿ ಮಾರಾಟವನ್ನು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಿಸಿರುವ ತನ್ನ ಆದೇಶವನ್ನು ಮಾರ್ಪಾಟು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ, ಈ ಮಾರಾಟ ನಿಷೇಧಕ್ಕೆ ಕೋಮುಬಣ್ಣವನ್ನು ನೀಡುತ್ತಿರುವುದಕ್ಕೂ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ನವೆಂಬರ್ 1ರ ವರೆಗೆ ಪಟಾಕಿ ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಅಕ್ಟೋಬರ್ 9 ರಂದು ಆದೇಶ ಹೊರಡಿಸಿತ್ತು. ಹೀಗಾಗಿ, ಈ ನಿಷೇಧವನ್ನು ತೆರವುಗೊಳಿಸಬೇಕೆಂದು ವ್ಯಾಪಾರಿಗಳು ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಆದೇಶವನ್ನು ತೆರವುಗೊಳಿಸಲು ನಿರಾಕರಿಸಿದೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಮಾರಾಟ ಮಾಡದಂತೆ ಪೊಲೀಸರು ನಿಗಾ ವಹಿಸಬೇಕು ಎಂದು ಸೂಚಿಸಿದೆ.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!