Monday , January 22 2018
Home / Film News / Bollywood / ಪ್ರಿಯತಮೆ ಅನುಷ್ಕಾರನ್ನು ವಿರಾಟ್ ಕರೆಯುವುದು ಹೇಗೆ…? : ಹೆಸರೇ ಸಖತ್​ ಇಂಟ್ರೆಸ್ಟಿಂಗ್ ಆಗಿದೆ…!
Buy Bitcoin at CEX.IO

ಪ್ರಿಯತಮೆ ಅನುಷ್ಕಾರನ್ನು ವಿರಾಟ್ ಕರೆಯುವುದು ಹೇಗೆ…? : ಹೆಸರೇ ಸಖತ್​ ಇಂಟ್ರೆಸ್ಟಿಂಗ್ ಆಗಿದೆ…!

ನವದೆಹಲಿ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರ ದೀಪಾವಳಿ ಸ್ಪೆಷಲ್​ ಚಾಟ್​ ಶೋ ಈಗ ಅಭಿಮಾನಿಗಳು ಮತ್ತು ಬಾಲಿವುಡ್​​ ಮಂದಿಯಲ್ಲಿ ಸಖತ್ ಕುತೂಹಲ ಸೃಷ್ಟಿಸಿದೆ. ವಿರಾಟ್ ತನ್ನ ಬ್ಯಾಟಿಂಗ್ ಮೂಲಕವೇ ಜನರ ಗಮನ ಸೆಳೆದರೆ, ಅಮೀರ್ ಅಭಿನಯದ ಮೂಲಕ ಹವಾ ಸೃಷ್ಟಿಸಿದವರು. ಈ ಇಬ್ಬರನ್ನು ಝಿ ವಾಹಿನಿ ದೀಪಾವಳಿ ವಿಶೇಷಕ್ಕೆ ಒಂದಾಗಿಸಿದೆ. ಜನರ ಈ ಕುತೂಹಲವನ್ನು ಹೆಚ್ಚಿಸುವಂತೆ ಟೀಸರ್ ಅನ್ನು ಝಿ ವಾಹಿನಿ ಬಿಡುಗಡೆ ಮಾಡಿದೆ. ಇದು ಜನರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಅಮೀರ್ ಮತ್ತು ವಿರಾಟ್ ತುಂಬಾ ಆಪ್ತವಾಗಿಯೇ ಇಲ್ಲಿ ಸಂವಾದ ನಡೆಸಿದ್ದಾರೆ. ಇಂಟ್ರೆಸ್ಟಿಂಗ್ ವಿಷಯಗಳ ಬಗ್ಗೆ ಇವರಿಬ್ಬರು ಮಾತನಾಡಿದ್ದಾರೆ. ತಮ್ಮ ಬದುಕಿನ ಸೀಕ್ರೆಟ್​​ ವಿಷಯಗಳನ್ನು ಇವರಿಬ್ಬರು ಇಲ್ಲಿ ರಿವೀಲ್ ಮಾಡಿದ್ದಾರೆ. ಇವೆಲ್ಲದರ ನಡುವೆ, ವಿರಾಟ್ ಅವರ ಒಂದು ಮಾತು ಈಗ ಸಖತ್ ಕುತೂಹಲ ಮೂಡಿಸಿದೆ. ಅದೇನೆಂದರೆ ‘‘ನೂಶ್ಕಿ’ ತುಂಬಾ ಪ್ರಾಮಾಣಿಕಳು ‘. ಜೀವನದಲ್ಲಿ ಒಂದೇ ಒಂದು ಬಾರಿಗೆ ನಾನು ಪ್ರೀತಿಗೆ ಬಿದ್ದಿದ್ದೇನೆ ಎನ್ನುವುದು ವಿರಾಟ್ ಮಾತು.


ಎಲ್ಲರಿಗೂ ಗೊತ್ತಿರುವಂತೆ ವಿರಾಟ್​ ಅನುಷ್ಕಾರ ಪ್ರೀತಿಗೆ ಬಿದ್ದಿದ್ದಾರೆ. ಇವರಿಬ್ಬರ ಪ್ರೀತಿಯ ವಿಷಯ ಈಗ ಗುಟ್ಟಾಗಿ ಉಳಿದಿರುವಂತಹದ್ದೇನು ಅಲ್ಲ. ಹೀಗಾಗಿ, ವಿರಾಟ್​ ಅನುಷ್ಕಾ ಬಗ್ಗೆಯೇ ಇಲ್ಲಿ ಮಾತನಾಡಿದ್ದಾರೆ ಎಂಬುದು ಎಲ್ಲರ ಅಭಿಪ್ರಾಯ. ಅದರಲ್ಲೂ ಇಲ್ಲಿ ವಿರಾಟ್​ ‘ನೂಶ್ಕಿ’ ಎಂದು ಹೇಳಿದ್ದಾರೆ. ಅಂದರೆ, ವಿರಾಟ್​ ಅನುಷ್ಕಾರನ್ನು ಪ್ರೀತಿಯಿಂದ ಹೀಗೆ ಕರೆಯುತ್ತಾರೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಆದರೆ, ನಿಜವಾಗಿಯೂ ವಿರಾಟ್​ ಹೇಳಿರುವುದು ಏನು ಎಂಬುದು ಗೊತ್ತಾಗಬೇಕಾದರೆ ಅಕ್ಟೋಬರ್​ 15ರ ವರೆಗೆ ಕಾಯಬೇಕಾಗಿದೆ. ಯಾಕೆಂದರೆ, ಅಂದೇ ಮಧ್ಯಾಹ್ನ 12 ಗಂಟೆಗೆ ಈ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!