Thursday , December 14 2017
Home / Multiplex / Kollywood / ತಂದೆಗೆ ಪುತ್ರಿಯ ಫುಲ್​ ಸಪೋರ್ಟ್​​​

ತಂದೆಗೆ ಪುತ್ರಿಯ ಫುಲ್​ ಸಪೋರ್ಟ್​​​

ಚೆನ್ನೈ : ಸೂಪರ್​ಸ್ಟಾರ್ ಕಮಲ್ ಹಾಸನ್ ರಾಜಕೀಯಕ್ಕೆ ಬರುವುದು ಪಕ್ಕಾ ಆಗಿದೆ. ಆದರೆ, ಅವರ ಸಹೋದರ ಚಾರು ಹಾಸನ್ ಮಾತ್ರ ಕಮಲ್​ ರಾಜಕೀಯದಲ್ಲಿ ಯಶಸ್ಸು ಗಳಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚಾರು ಹಾಸನ್ ಅವರನ್ನು ಬಿಟ್ಟು ಕುಟುಂಬದ ಬಾಕಿ ಸದಸ್ಯರೆಲ್ಲಾ ಉಲಗನಾಯಕನಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ನಡುವೆ, ಪುತ್ರಿ ಶ್ರುತಿ ಹಾಸನ್ ಕೂಡಾ ತಂದೆಗೆ ಫುಲ್ ಸಪೋರ್ಟ್ ಕೊಟ್ಟಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಶೃತಿ, ನನ್ನ ತಂದೆ ಪ್ರಾಮಾಣಿಕರು. ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ಜನಸೇವೆಗಾಗಿ ಅವರು ರಾಜಕೀಯಕ್ಕೆ ಬಂದಿದ್ದಾರೆ. ಅವರು ತೆರೆ ಮೇಲೆ ಮಾತ್ರ ಅಲ್ಲ. ನಿಜ ಜೀವನದಲ್ಲೂ ಒಳ್ಳೆಯ ನಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೊಂದ್ಕಡೆ, ದಶಕಕ್ಕೂ ಹೆಚ್ಚು ಕಾಲ ಕಮಲ್ ಜೊತೆ ಬಾಳಿದ್ದ ನಟಿ ಗೌತಮಿ ಮಾತ್ರ ಕಮಲ್​ ಹಾಸನ್​ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಒಂದು ವರ್ಷಗಳ ಹಿಂದಷ್ಟೇ ಈ ಜೋಡಿ ಪರಸ್ಪರ ದೂರವಾಗಿತ್ತು.

About sudina

Check Also

ಬಿಲ್ಡರ್ ಮೂಗಿಗೆ ಹೊಡೆದ ಹಾಸ್ಯ ನಟ ಸಂತಾನಂ ವಿರುದ್ಧ ಕೇಸ್​

ಚೆನ್ನೈ : ತಮಿಳಿನ ಖ್ಯಾತ ಹಾಸ್ಯ ನಟ ಸಂತಾನಂ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಇವರ ಜೊತೆ ಜಗಳ ಮಾಡಿರುವ …

Leave a Reply

Your email address will not be published. Required fields are marked *

error: Content is protected !!