Monday , January 22 2018
Home / Film News / Bollywood / 51ರ ಮಿಲಿಂದ್​ ಸೋಮನ್​​ಗೆ 18ರ ಪ್ರೇಯಸಿ…!
Buy Bitcoin at CEX.IO

51ರ ಮಿಲಿಂದ್​ ಸೋಮನ್​​ಗೆ 18ರ ಪ್ರೇಯಸಿ…!

ಮುಂಬೈ: ಬಾಲಿವುಡ್​ನ ಖ್ಯಾತ ನಟ ಮಿಲಿಂದ್​ ಸೋಮನ್​​​ ಈಗ ಮಾಧ್ಯಮಗಳ ಗಮನ ಸೆಳೆದಿದ್ದಾರೆ. ಅದಕ್ಕೆ ಕಾರಣ ಅವರ ಲವ್ ಲೈಫ್​​. ಮಿಲಿಂದ್​​​​​​​​ ಲವ್​ ಲೈಫ್ ಈಗ ಮಾಧ್ಯಮಗಳಲ್ಲಿ ಹೆಡ್​ಲೈನ್ ಆಗಿದೆ. ಮಿಲಿಂಗ್ ಈಗ ಪ್ರೀತಿಗೆ ಬಿದ್ದಿದ್ದಾರೆ. ಮಿಲಿಂದ ಪ್ರಿಯತಮೆಯ ಹೆಸರು ಅಂಕಿತಾ ಕೊನ್​ವಾರ್​. ಆದರೆ, ಈ ಪ್ರೇಮಪತಂಗಗಳ ನಡುವಿನ ವಯಸ್ಸಿನ ಅಂತರವೇ ಕುತೂಹಲಕ್ಕೆ ಕಾರಣವಾಗಿದ್ದು.

ಮಿಲಿಂದ್​ ವಯಸ್ಸು 51. ಅಂಕಿತಾಗೆ 18…! ಅಂದರೆ, ಬರೋಬ್ಬರಿ 33 ವರ್ಷ ಕಿರಿಯವಳೊಂದಿಗೆ ಮಿಲಿಂದ್ ಡೇಟಿಂಗ್ ಮಾಡುತ್ತಿದ್ದಾರೆ. ಮಿಲಿಂದ್ ಮತ್ತು ಅಂಕಿತಾ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲೂ ಮಿಲಿಂದ್ ತನ್ನ ಪ್ರೇಯಸಿಯ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಇದು ಕೂಡಾ ಶೋಷಿಯಲ್ ಮೀಡಿಯಾದಲ್ಲಿ ಸಖತ್​ ಹಾಟ್ ಟಾಪಿಕ್ ಆಗುತ್ತಿದೆ.

ಮಿಲಿಂದ್​ 2006ರಲ್ಲಿ ಮೈಲೀನ್ ಜಂಪಾನಿಯಿಯ ಎಂಬುವವರನ್ನು ವರಿಸಿದ್ದರು. ಈ ದಂಪತಿ 2009ರಲ್ಲಿ ದೂರವಾಗಿದ್ದರು. ಇದಾದ ಬಳಿಕ ಮಿಲಿಂದ್ ಒಂಟಿಯಾಗಿಯೇ ಇದ್ದಾರೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!