Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Tollywood / Behave yourself : ನಿರೂಪಕಿಗೆ ಸೂಚ್ಯವಾಗಿ ಎಚ್ಚರಿಕೆ ನೀಡಿದ ನಾಗಾರ್ಜುನ

Behave yourself : ನಿರೂಪಕಿಗೆ ಸೂಚ್ಯವಾಗಿ ಎಚ್ಚರಿಕೆ ನೀಡಿದ ನಾಗಾರ್ಜುನ

ಹೈದರಾಬಾದ್ : ಟಾಲಿವುಡ್​ನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ಸೊಸೆ ಸಮಂತಾ ತಮ್ಮ ‘ರಾಜು ಗಾರಿ ಗಾದಿ 2’ ಚಿತ್ರದ ರಿಲೀಸ್ ಖುಷಿಯಲ್ಲಿ ಇದ್ದಾರೆ. ಆದರೆ, ಈ ಚಿತ್ರದ ಪ್ರಮೋಷನ್​ ವೇಳೆ ಮಾಧ್ಯಮವೊಂದರ ಸಂದರ್ಶನದಲ್ಲಿ ಇವರಿಬ್ಬರು ಭಾಗವಹಿಸಿದ್ದರು. ಇವರನ್ನು ಸಂದರ್ಶನ ಮಾಡಿದ್ದು ಖ್ಯಾತ ನಿರೂಪಕಿ ಶ್ಯಾಮಲ. ಚೆನ್ನಾಗಿ ಸಾಗುತ್ತಿದ್ದ ಸಂದರ್ಶನದ ವೇಳೆ ನಿರೂಪಕಿ ಒಂದು ಕಿರಿಕ್ ಪ್ರಶ್ನೆ ಕೇಳಿದ್ದು, ನಾಗಾರ್ಜುನರನ್ನು ಸ್ವಲ್ಪ ಕಸಿವಿಸಿಗೊಳಿಸಿತ್ತು. ಹೀಗಾಗಿ, ನಗುನಗುತ್ತಲೇ ನಾಗಾರ್ಜುನ ನಿರೂಪಕಿಗೆ Behave yourself ಎಂದು ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ.

ನಿಜವಾಗಿ ನಡೆದದ್ದೇನು? : ಶ್ಯಾಮಲ ನಾಗಾರ್ಜುನರಲ್ಲಿ ಮೊದಲು ಕೇಳಿದ ಪ್ರಶ್ನೆ, ನೀವು ಮೀಸೆ ಯಾಕೆ ತೆಗೆದಿದ್ದೀರಿ…? ಅಂತ. ಅದಕ್ಕೆ ನಾಗಾರ್ಜುನ, ಮೀಸೆ ತೆಗೆದಿರುವ ಹಿಂದೆ ಯಾವುದೇ ಕಾರಣ ಇಲ್ಲ ಎಂದು ಹೇಳಿದರು. ಇದಾದ ಬಳಿಕ ಮತ್ತೆ ತಮ್ಮ ಪ್ರಶ್ನೆಯನ್ನು ಮುಂದುವರಿಸಿದ ಶ್ಯಾಮಲಾ, ನಿಮ್ಮ ವಯಸ್ಸನ್ನು ಕಡಿಮೆ ಕಾಣುವ ಸಲುವಾಗಿ ಹೀಗೆ ಮೀಸೆ ತೆಗೆದಿದ್ದೀರಾ? ಎಂದು ಕೇಳಿದರು. ಇದು ನಾಗಾರ್ಜುನರಿಗೆ ಕೊಂಚ ಕಸಿವಿಸಿ ಮೂಡಿಸಿತ್ತು. ಆಗ ನಗುತ್ತಲೇ ಉತ್ತರಿಸಿದ ನಾಗಾರ್ಜುನ, ನನ್ನ ಸೊಸೆ ಪಕ್ಕದಲ್ಲೇ ಇದ್ದಾಳೆ, ಸರಿಯಾಗಿ ಮಾತನಾಡಿ ಎಂದು ಹೇಳಿದರು. ನಾಗಾರ್ಜುನರ ನಗುತ್ತಲೇ ಮಾತನಾಡಿದರೂ ಬಹುಶಃ ಅದರ ಹಿಂದಿನ ಎಚ್ಚರಿಕೆಯ ಧ್ವನಿಯನ್ನು ಅರಿತ ನಿರೂಪಕಿ ಬೇರೆ ಪ್ರಶ್ನೆಗಳತ್ತ ಹೊರಳಿದರು…ಅಂದು ಏನಾಯ್ತು…? ಇಲ್ಲಿದೆ ನೋಡಿ ವೀಡಿಯೋ…

About sudina

Check Also

ಮತ್ತೊಮ್ಮೆ ತಂದೆಯಾದ ಪವನ್ ಕಲ್ಯಾಣ್​ : ಮೂರನೇ ಪತ್ನಿಗೆ ಎರಡನೇ ಮಗು ಜನನ…

ಹೈದರಾಬಾದ್​ : ಟಾಲಿವುಡ್​ನ ಪವರ್​​ಸ್ಟಾರ್​​​ ಟಾಲಿವುಡ್​​ ಪವನ್ ಕಲ್ಯಾಣ್​ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ… ಪವನ್​ ಮೂರನೇ ಹೆಂಡ್ತಿ ತಾಯಿಯಾಗಿದ್ದಾರೆ… …

Leave a Reply

Your email address will not be published. Required fields are marked *

error: Content is protected !!