Thursday , December 14 2017
Home / News NOW / ಕಳುವಾಗಿದ್ದ ಅರವಿಂದ ಕೇಜ್ರಿವಾಲ್ ಕಾರು ಕೊನೆಗೂ ಪತ್ತೆ

ಕಳುವಾಗಿದ್ದ ಅರವಿಂದ ಕೇಜ್ರಿವಾಲ್ ಕಾರು ಕೊನೆಗೂ ಪತ್ತೆ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವ್ಯಾಗನಾರ್ ಕಾರು ಮೊನ್ನೆ ಕಳವಾಗಿತ್ತು. ಸಚಿವಾಲಯದ ಸಮೀಪದ ನಿಲ್ಲಿಸಿದ್ದ ಕಾರನ್ನು ವ್ಯಕ್ತಿಯೊಬ್ಬ ಕೊಂಡು ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಈ ಕಾರು ಶನಿವಾರ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಪತ್ತೆ ಆಗಿದೆ.

ಕೇಜ್ರಿವಾಲ್ ಅವರ ರಾಜಕೀಯ ಜೀವನದಲ್ಲಿ ಈ ಕಾರಿಗೆ ದೊಡ್ಡ ಪಾತ್ರವಿದೆ. ಇದನ್ನು ಆಮ್ ಆದ್ಮಿ ಕಾರು ಎಂದೇ ಕರೆಯಲಾಗುತ್ತದೆ. ಚುನಾವಣೆಯ ಸಂದರ್ಭದಲ್ಲೂ ಕೇಜ್ರಿವಾಲ್ ಇದೇ ಕಾರಿನಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದರು. ಮುಖ್ಯಮಂತ್ರಿ ಪಟ್ಟಕ್ಕೇರಿದ ಬಳಿಕವೂ ಕೇಜ್ರಿವಾಲ್ ಇದೇ ಕಾರನ್ನು ಬಳಸುತ್ತಿದ್ದರು.

About sudina

Check Also

ಆದೇಶ ಬದಲಾವಣೆ ಸಾಧ್ಯವಿಲ್ಲ : ಪಟಾಕಿ ನಿಷೇಧಕ್ಕೆ ಕೋಮುಬಣ್ಣ ಕೂಡಾ ಬೇಡ : ಸುಪ್ರೀಂಕೋರ್ಟ್

ನವದೆಹಲಿ : ಪರಿಸರ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ದೀಪಾವಳಿ ಪಟಾಕಿ ಮಾರಾಟವನ್ನು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಿಸಿರುವ …

Leave a Reply

Your email address will not be published. Required fields are marked *

error: Content is protected !!