Sunday , February 17 2019
ಕೇಳ್ರಪ್ಪೋ ಕೇಳಿ
Home / Film News / Bollywood / ಸೆಲ್ಫಿ ಮೂಲಕ ಮತ್ತೆ ಟ್ರೋಲ್​ಗೆ ಗುರಿಯಾದ ಫಾತಿಮಾ ಸನಾ ಶೇಖ್​​…!

ಸೆಲ್ಫಿ ಮೂಲಕ ಮತ್ತೆ ಟ್ರೋಲ್​ಗೆ ಗುರಿಯಾದ ಫಾತಿಮಾ ಸನಾ ಶೇಖ್​​…!

ಮುಂಬೈ : ದಂಗಲ್​ ಬೆಡಗಿ ಫಾತಿಮಾ ಸನಾ ಶೇಖ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿ ಆಗಿದ್ದಾರೆ. 25 ವರ್ಷದ ಈ ನಟಿ ಮೈ ಕಾಣುವಂತೆ ಸೀರೆ ತೊಟ್ಟಿದ್ದಾರೆ ಅಂತ ಕೆಲವರು ಕಿಡಿಕಾರಿದ್ದಾರೆ. ಹೀಗಾಗಿ, ಫಾತಿಮಾ ಸನಾ ವಿರುದ್ಧ ಭಾರೀ ಆಕ್ಷೇಪವನ್ನೇ ಕೆಲವರು ವ್ಯಕ್ತಪಡಿಸಿದ್ದಾರೆ.

Shameless selfie😬📸 credit for Saree @swatimukund 😘😘

A post shared by Fatima Sana Shaikh (@fatimasanashaikh) on


ಈ ನಡುವೆ, ಫಾತಿಮಾಗೆ ಬೆಂಬಲ ನೀಡಿದವರ ಸಂಖ್ಯೆಯೂ ಅಧಿಕವಾಗಿಯೇ ಇದೆ. ಕೆಲವರು ಇವರ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಕೆಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಲಹೆಯನ್ನೂ ಕೊಟ್ಟಿದ್ದಾರೆ.


ಫಾತಿಮಾ ಇದೇ ಮೊದಲ ಬಾರಿಗೆ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಒಳಗಾಗಿಲ್ಲ. ಇದೇ ವರ್ಷದ ಜೂನ್ ತಿಂಗಳಲ್ಲಿ ಇಸ್ಲಾಂ ಧರ್ಮದ ಪವಿತ್ರ ರಂಜಾನ್ ವೇಳೆ ಇವರು ಧರಿಸಿದ ಬಟ್ಟೆಯ ಕಾರಣದಿಂದ ಫಾತಿಮಾ ಇದೇ ಪರಿಸ್ಥಿತಿಯಲ್ಲಿ ಎದುರಿಸಿದ್ದರು. ಈ ವೇಳೆ, ಇವರು ಥಗ್ಸ್ ಆಫ್​ ಹಿಂದೂಸ್ಥಾನ್​ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಈ ಶೂಟಿಂಗ್ ಫೋಟೋ ಆಗ ಟ್ರೋಲ್​ಗೆ ಗುರಿಯಾಗಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!