Monday , February 18 2019
ಕೇಳ್ರಪ್ಪೋ ಕೇಳಿ
Home / Film News / Bollywood / 200 ಚಿನ್ನದ ಕೆಲಸಗಾರರು, 400 ಕೆ.ಜಿ. ಬಂಗಾರ, 600 ದಿನಗಳ ಕೆಲಸ…! ಇದು ಪದ್ಮಾವತಿಯ ಆಭರಣಗಳ ಹಿಂದಿನ ಕತೆ : ಇಲ್ಲಿದೆ ವೀಡಿಯೋ

200 ಚಿನ್ನದ ಕೆಲಸಗಾರರು, 400 ಕೆ.ಜಿ. ಬಂಗಾರ, 600 ದಿನಗಳ ಕೆಲಸ…! ಇದು ಪದ್ಮಾವತಿಯ ಆಭರಣಗಳ ಹಿಂದಿನ ಕತೆ : ಇಲ್ಲಿದೆ ವೀಡಿಯೋ

ಮುಂಬೈ : ಸಂಜಯ್​ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್ ಅಭಿನಯದ ಪದ್ಮಾವತಿ ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಅಭಿಮಾನಿಗಳು ಈ ಚಿತ್ರವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಟೀಸರ್ ಕೂಡಾ ಸಖತ್​ ಹಿಟ್​ ಆಗಿದೆ. ಅದರಲ್ಲೂ ರಾಣಿ ಪದ್ಮಾವತಿ ಗೆಟಪ್​ನಲ್ಲಿ ದೇವತೆಯಂತೆ ಮಿಂಚುವ ದೀಪಿಕಾ ಕೂಡಾ ಸಖತ್ ಗಮನ ಸೆಳೆದಿದ್ದಾರೆ. ಡಿಪ್ಸ್​ ತೊಟ್ಟಿರುವ ಆಭರಣಗಳೂ ಎಲ್ಲರ ಕಣ್ಣು ಕುಕ್ಕುವಂತಿದೆ.

ಚಿತ್ರದ ಪ್ರತೀ ಫ್ರೇಮ್​ ಕೂಡಾ ತುಂಬಾ ರಿಚ್​ ಆಗಿಯೇ ಬಂದಿದೆ. ಹೀಗಾಗಿ, ದೀಪಿಕಾರ ಲುಕ್​ ಕೂಡಾ ಈಗ ಟಾಕ್​ ಆಫ್​​ ದಿ ಟೌನ್ ಆಗುತ್ತಿದೆ. ಖ್ಯಾತ ಆಭರಣ ತಯಾರಿಕಾ ಸಂಸ್ಥೆ ಈ ಚಿತ್ರಕ್ಕಾಗಿ ವಿಶೇಷ ವಿನ್ಯಾಸದ ಆಭರಣಗಳನ್ನು ತಯಾರು ಮಾಡಿ ಕೊಟ್ಟಿದೆ. ದೀಪಿಕಾ ತೊಟ್ಟಿರುವ ಆಭರಣದ ಹಿಂದೆ ಇರುವುದು ತನಿಶ್ಕ್​ ಜುವೆಲರಿ… ಇಲ್ಲಿದೆ ನೋಡಿ ಪದ್ಮಾವತಿಗಾಗಿ ತನಿಷ್ಕ್​ನ ಆಭರಣ ತಯಾರಿಯ ವೀಡಿಯೋ.

ಪದ್ಮಾವತಿ ಚಿತ್ರಕ್ಕಾಗಿ ತನಿಶ್ಕ್​ ವಿಶೇಷ ವಿನ್ಯಾಸದ ಒಡವೆಗಳನ್ನು ತಯಾರಿಸಿದೆ. ಈ ಒಡವೆ ತಯಾರಿಯ ಹಿಂದೆ 200 ಚಿನ್ನದ ಕೆಲಸಗಾರರು ಇದ್ದಾರೆ. 400 ಕೆ.ಜಿ.ಬಂಗಾರ ಬಳಕೆ ಮಾಡಲಾಗಿದೆ. ಸುಮಾರು 600 ದಿನಗಳ ಕಾಲ ಶ್ರಮ ವಹಿಸಿ ನುರಿತ ಕೆಲಸಗಾರರೇ ಈ ಆಭರಣಗಳನ್ನು ಸಿದ್ಧ ಮಾಡಿದ್ದಾರೆ.

ದೀಪಿಕಾಗೆ ಮಾತ್ರವಲ್ಲ. ಇಲ್ಲಿ ಮಹಾರವಲ್​​ ರತನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಾಹಿದ್ ಕಪೂರ್​ಗೂ ಈ ತಂಡ ಆಭರಣ ಸಿದ್ಧ ಮಾಡಿ ಕೊಟ್ಟಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!