Thursday , December 14 2017
Home / Bollywood / ಮಾಲ್ಡೀವ್ಸ್​​ನಲ್ಲಿ ಅಮಿತಾಭ್​ ಕುಟುಂಬದ ಖುಷಿ : ವೈರಲ್ ಆಗಿವೆ ಫೋಟೋಗಳು

ಮಾಲ್ಡೀವ್ಸ್​​ನಲ್ಲಿ ಅಮಿತಾಭ್​ ಕುಟುಂಬದ ಖುಷಿ : ವೈರಲ್ ಆಗಿವೆ ಫೋಟೋಗಳು

ಮುಂಬೈ : ಇತ್ತೀಚೆಗಷ್ಟೇ 75ನೇ ವಸಂತಕ್ಕೆ ಕಾಲಿಟ್ಟ ಬಿಗ್​ ಬಿ ಅಮಿತಾಭ್​ ಕುಟುಂಬ ಮಾಲ್ಡೀವ್ಸ್​​ನಲ್ಲಿ ಒಂದಷ್ಟು ಖುಷಿಯ ಹೊತ್ತುಗಳನ್ನು ಕಳೆದಿದೆ. ಇವರ ಸಂತೋಷದ ಫೋಟೋಗಳು ಈಗ ವೈರಲ್ ಆಗಿವೆ.


ನಿಜವಾಗಿ, ಬಿಗ್​ ಬಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಇಷ್ಟವಿರಲಿಲ್ಲ. ಈ ಬಗ್ಗೆ ಬಿಗ್​ ಬಿ ಈ ಹಿಂದೆಯೇ ಹೇಳಿಕೊಂಡಿದ್ದರು. ಹೀಗಾಗಿಯೇ, ಮಾಲ್ಡೀವ್ಸ್​ಗೆ ಅಮಿತಾಭ್​ ಪತ್ನಿ ಜಯಾ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಹೋಗಿದ್ದರು. ಇಲ್ಲಿ ಇವರೆಲ್ಲಾ ಖುಷಿಯಿಂದ ಕಳೆದಿದ್ದಾರೆ. ಈ ಫೋಟೋಗಳೆಲ್ಲಾ ಈಗ ವೈರಲ್ ಆಗಿವೆ. ಎಲ್ಲರೂ ಬಚ್ಚನ್ ಕುಟುಂಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಲೈಕ್ ಬಟನ್ ಅದುಮಿದ್ದಾರೆ. ಇನ್ನು, ಕೆಲವು ವರದಿ ಪ್ರಕಾರ ಬಚ್ಚನ್​ ಮಾಲ್ಡೀವ್ಸ್​ನಲ್ಲಿ ಕುಟುಂಬದ ಒತ್ತಾಯಕ್ಕೆ ಮಣಿದು ಹುಟ್ಟುಹಬ್ಬ ಆಚರಿಸಿದ್ದಾರಂತೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

About sudina

Check Also

ಸೆಲ್ಫಿ ಮೂಲಕ ಮತ್ತೆ ಟ್ರೋಲ್​ಗೆ ಗುರಿಯಾದ ಫಾತಿಮಾ ಸನಾ ಶೇಖ್​​…!

ಮುಂಬೈ : ದಂಗಲ್​ ಬೆಡಗಿ ಫಾತಿಮಾ ಸನಾ ಶೇಖ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿ ಆಗಿದ್ದಾರೆ. 25 ವರ್ಷದ …

Leave a Reply

Your email address will not be published. Required fields are marked *

error: Content is protected !!