Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / ಬಾಲಿವುಡ್​ನ ಹಿರಿಯ ನಿರ್ದೇಶಕ ಲೇಖ್​ ಟಂಡನ್​​ ವಿಧಿವಶ

ಬಾಲಿವುಡ್​ನ ಹಿರಿಯ ನಿರ್ದೇಶಕ ಲೇಖ್​ ಟಂಡನ್​​ ವಿಧಿವಶ

ಮುಂಬೈ : ಬಾಲಿವುಡ್​ನ ಖ್ಯಾತ ಸಿನಿಮಾ ನಿರ್ಮಾತೃ ಲೇಖ್​​ ಟಂಡನ್​  ವಿಧಿವಶರಾಗಿದ್ದಾರೆ. ಭಾನುವಾರ ಸಂಜೆ ಇವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷವಾಗಿತ್ತು. ಪೊವಾಯಿಯ ತಮ್ಮ ನಿವಾಸದಲ್ಲಿ ಟಂಡನ್​ ಕೊನೆಯುಸಿರೆಳೆದಿರುವುದಾಗಿ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕಳೆದ ಆರು ತಿಂಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಇವರು ಹಾಸಿಗೆ ಹಿಡಿದಿದ್ದರು, ಪೈಪ್​ ಮೂಲಕ ಇವರಿಗೆ ಆಹಾರ ನೀಡಲಾಗುತ್ತಿತ್ತು.

1929ರಲ್ಲಿ ಜನಿಸಿರುವ ಟಂಡನ್ ಅವರು ಬಾಲಿವುಡ್​​ನಲ್ಲಿ ಮೈಲುಗಲ್ಲಾಗುವಂತಹ ಹಲವು ಸಿನೆಮಾಗಳನ್ನು ನಿರ್ದೇಶನ ಮಾಡಿದ್ದರು. ಶಾರೂಖ್​ ಖಾನ್ ನಟಿಸಿದ್ದ ಮೊದಲ ಧಾರಾವಾಹಿ ‘ದಿಲ್​ ದಾರಿಯಾ’ ವನ್ನು 1988ರಲ್ಲಿ ನಿರ್ದೇಶನ ಮಾಡಿದ್ದು ಇವರೇ. ಈ ಮೂಲಕ ಶಾರೂಖ್ ಎಂಬ ನಟ ಪರಿಚಯ ಲೋಕಕ್ಕೆ ಆಗಿತ್ತು. ಇನ್ನು, ಸ್ವದೇಶ್​, ಚೆನ್ನೈ ಎಕ್ಸ್​​ಪ್ರೆಸ್​​​, ರಂಗ್​ ದೇ ಬಸಂತಿ ಚಿತ್ರದಲ್ಲಿ ಇವರು ನಟಿಸಿದ್ದರು. ಟಂಡನ್ ಅವರ ನಿಧನಕ್ಕೆ ಬಾಲಿವುಡ್​ನ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

About sudina

Check Also

ಸೆಲ್ಫಿ ಮೂಲಕ ಮತ್ತೆ ಟ್ರೋಲ್​ಗೆ ಗುರಿಯಾದ ಫಾತಿಮಾ ಸನಾ ಶೇಖ್​​…!

ಮುಂಬೈ : ದಂಗಲ್​ ಬೆಡಗಿ ಫಾತಿಮಾ ಸನಾ ಶೇಖ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿ ಆಗಿದ್ದಾರೆ. 25 ವರ್ಷದ …

Leave a Reply

Your email address will not be published. Required fields are marked *

error: Content is protected !!