Thursday , November 15 2018
ಕೇಳ್ರಪ್ಪೋ ಕೇಳಿ
Home / News NOW / ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ
ಪ್ರಾತಿನಿಧಿಕ ಚಿತ್ರ

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಅಧಿಕಾರಿಯ ಸ್ಥಿತಿ ಗಂಭೀರವಾಗಿದೆ. ದಾಳಿಗೊಳಗಾದ ಅಧಿಕಾರಿಯನ್ನು ದೀಪಕ್ ಕೆ ಮಂಡಲ್ ಎಂದು ಗುರುತಿಸಲಾಗಿದೆ. ಇವರು ಬಿಎಸ್​ಎಫ್​ನ 145ನೇ ಬೆಟಾಲಿಯನ್​ನಲ್ಲಿ ಹಿರಿಯ ಅಧಿಕಾರಿಯಾಗಿದ್ದಾರೆ. ಸದ್ಯ ಇವರನ್ನು ವಿಮಾನದ ಮೂಲಕ ಕೋಲ್ಕತ್ತಾಕ್ಕೆ ಕರೆತರಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ತಂಡ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದೆ.

ಸಿಪಾಯಿಜಿಲಾ ಜಿಲ್ಲೆಯ ಬೆಲಾರ್ದೀಪ ಗಡಿಯಲ್ಲಿ ಇವತ್ತು ಇವರ ಮೇಲೆ ದಾಳಿ ಮಾಡಲಾಗಿದೆ. ಅಕ್ರಮ ಜಾನುವಾರ ಸಾಗಾಟಗಾರರು ತಮ್ಮ ವಾಹನವನ್ನು ಡಿಕ್ಕಿ ಹೊಡೆಯುವ ಮೂಲಕ ಈ ಕೃತ್ಯವೆಸಗಿದ್ದಾರೆ. ಈ ಪ್ರದೇಶದಲ್ಲಿ ನಡೆಯುತ್ತಿದ್ದ ಜಾನುವಾರು ಕಳ್ಳತನದ ಮೇಲೆ ಇವರು ತೀವ್ರ ನಿಗಾ ಇಟ್ಟಿದ್ದರು. ಬಹುಶಃ ಇದೇ ಇವರ ಮೇಲಿನ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ದಾಳಿ ವೇಳೆ, ಪರಿಸ್ಥಿತಿ ನಿಯಂತ್ರಿಸಲು ಸೈನಿಕರು ದಾಳಿಕೋರರ ಮೇಲೆ ಎ.ಕೆ.47 ರೈಫಲ್​ನಲ್ಲಿ ಐದು ಸುತ್ತಿನ ಗುಂಡಿನ ದಾಳಿಯೂ ನಡೆಸಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!