Thursday , December 14 2017
Home / Bollywood / ಕನಸಿನ ಕನ್ಯೆಗೆ ಈಗ 69 ವರ್ಷ

ಕನಸಿನ ಕನ್ಯೆಗೆ ಈಗ 69 ವರ್ಷ

ಮುಂಬೈ : ಬಾಲಿವುಡ್​ನ ಕನಸಿನ ಕನ್ಯೆ ಹೇಮಾಮಾಲಿನಿ ಈಗ ಹುಟ್ಟುಹಬ್ಬದ ಖುಷಿಯಲ್ಲಿ ಇದ್ದಾರೆ. ಡ್ರೀಮ್​ಗರ್ಲ್​ 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೇಮಾಮಾಲಿನಿ ವಯಸ್ಸಿನ ಅಂಕಿ ಅಂಶ ಬರೀ ಲೆಕ್ಕಕ್ಕೆ ಮಾತ್ರ. ಸೌಂದರ್ಯ, ಮಾಡಿರುವ ಸಿನೆಮಾಗಳು, ಈಗಲೂ ಬಣ್ಣದ ಲೋಕದಲ್ಲಿ ಮಿಂಚುವ ಪರಿ ಇವೆಲ್ಲಾ ಹೇಮಾ ಮಾಲಿನಿ ಖ್ಯಾತಿ ಮತ್ತು ಶ್ರಮಕ್ಕೆ ಸಾಕ್ಷಿ. 69ನೇ ಹರೆಯದಲ್ಲೂ ಹೇಮಾ ಸಖತ್ ಬ್ಯುಸಿ. ಈಗಲೂ ಇವರು ಸಿನಿಲೋಕ ಮತ್ತು ನಾಟ್ಯ ಕ್ಷೇತ್ರದಲ್ಲಿ ಸಕ್ರಿಯೆ. ರಾಜಕೀಯದಲ್ಲೂ ಇವರ ಹೆಜ್ಜೆ ಗುರುತುಗಳಿವೆ.

ಈಗ ಖ್ಯಾತಿಯ ಉತ್ತುಂಗದಲ್ಲಿರುವ ಹೇಮಾ ತಮಿಳಿನ ಖ್ಯಾತ ನಿರ್ದೇಶಕರಿಂದ ಮೊದಲ ಬಾರಿಗೆ ರಿಜೆಕ್ಟ್​ ಆದ ನಟಿ…! 1964ರಲ್ಲಿ ತಮಿಳಿನ ಸಿ.ವಿ.ಶ್ರೀಧರ್ ಎಂಬ ನಿರ್ದೇಶಕರು ಹೇಮಾಮಾಲಿನಿ ‘ಸ್ಟಾರ್​ ಮೆಟೀರಿಯಲ್’ ಅಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಿದ್ದರು. ಈ ತಿರಸ್ಕಾರವನ್ನೇ ಬಹುಶಃ ಹೇಮಾ ಸವಾಲಾಗಿ ಸ್ವೀಕರಿಸಿದರೋ ಗೊತ್ತಿಲ್ಲ.. ಆ ಬಳಿಕ ಇವರು ಬೆಳೆದ ಪರಿ ಈಗ ಇತಿಹಾಸ…

ಕನಸಿಕ ಕನ್ಯೆಯಾಗಿ ಮೆರೆದಿದ್ದ ಹೇಮಾ ಮಾಲಿನಿ ಸಿನೆಮಾ ಲೋಕದ ಸ್ಟಾರ್ ನಟರ ಮನಸ್ಸೂ ಕದ್ದಿದ್ದರು. ಜಿತೇಂದ್ರ ಮತ್ತು ಸಂಜೀವ್ ಕುಮಾರ್ ಮದುವೆಯ ಪ್ರಸ್ತಾವನೆಯನ್ನೂ ಮುಂದಿಟ್ಟಿದ್ದರು ಎಂಬುದನ್ನು ಹೇಮಾ ತಮ್ಮ ಆತ್ಮಕತೆ ‘ಹೇಮಾಮಾಲಿನಿ : ದಿ ಅಥರೈಸ್ಡ್​​​ ಬಯೋಗ್ರಫಿ’ಯಲ್ಲಿ ಬರೆದುಕೊಂಡಿದ್ದಾರೆ.

About sudina

Check Also

ಸೆಲ್ಫಿ ಮೂಲಕ ಮತ್ತೆ ಟ್ರೋಲ್​ಗೆ ಗುರಿಯಾದ ಫಾತಿಮಾ ಸನಾ ಶೇಖ್​​…!

ಮುಂಬೈ : ದಂಗಲ್​ ಬೆಡಗಿ ಫಾತಿಮಾ ಸನಾ ಶೇಖ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿ ಆಗಿದ್ದಾರೆ. 25 ವರ್ಷದ …

Leave a Reply

Your email address will not be published. Required fields are marked *

error: Content is protected !!