Friday , June 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ ಶೋ 10 ಸೀಸನ್ ಮುಗಿಸಿದ್ದು, 11ನೇ ಸೀಸನ್​ ನಡೆಯುತ್ತಿದೆ. ತುಂಬಾ ಇಂಟ್ರಸ್ಟಿಂಗ್ ಆಗಿ ಸಾಗುತ್ತಿದ್ದ ಈ ರಿಯಾಲಿಟಿ ಶೋನಲ್ಲಿ ಈಗ ಮಾಟ ಮಂತ್ರದ ಮಾತುಗಳು ಕೇಳಿ ಬಂದಿವೆ.

ಮೊನ್ನೆ ಬಿಗ್​ಬಾಸ್ ಸ್ಪರ್ಧಿ, ಸ್ವಯಂ ಘೋಷಿತ ದೇವಮಹಿಳೆ ಶಿವಾನಿ ದುರ್ಗಾ ಮತ್ತೋರ್ವ ಸ್ಪರ್ಧಿ ಶಿಲ್ಪಾ ಶಿಂಧೆಗೆ ಮಾಟ ಮಂತ್ರ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು. ತಡರಾತ್ರಿ ಶಿಲ್ಪಾ ಪಕ್ಕ ಶಿವಾನಿ ಕುಳಿತು ದಿಟ್ಟಿಸುತ್ತಿದ್ದ ರೀತಿ ಒಂದು ಕ್ಷಣ ಮನೆಯೊಳಗಿನ ಇತರ ಸ್ಫರ್ಧಿಗಳಲ್ಲೂ ಭಯ ಹುಟ್ಟಿಸಿತ್ತು. ಜೊತೆ, ಇದು ಸಖತ್ ವೈರಲ್ ಕೂಡಾ ಆಗಿತ್ತು.

ಆದರೆ, ಈ ವಾರದ ಶಿವಾನಿ ದುರ್ಗಾ ಮನೆಯಿಂದ ಔಟ್ ಆಗಿದ್ದಾರೆ. ಬಿಗ್​ಬಾಸ್​ ಮನೆಯಿಂದ ಹೊರ ಬಂದ ಬಳಿಕ ಮಾತನಾಡಿರುವ ಶಿವಾನಿ ದುರ್ಗಾ, ನಾನು ಶಿಲ್ಪಾ ಮೇಲೆ ಮಾಟ ಮಂತ್ರ ಮಾಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ನಾನು ಏನೂ ಮಾಡಿಲ್ಲ. ಶಿಲ್ಪಾ ಯಾಕೆ ಈ ಸುದ್ದಿ ಹಬ್ಬಿದರೋ ನನಗೆ ಗೊತ್ತಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಅದೇನೇ ಆದರೂ ರಿಯಾಲಿಟಿ ಶೋನಲ್ಲಿ ನಡೆದ ಮಾಟ ಮಂತ್ರದ ಆರೋಪದ ಪ್ರಸಂಗ ಮನೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದೇ ಅಲ್ಲದೆ ಶೋ ಬಗ್ಗೆ ಪರ ವಿರೋಧ ಮಾತುಗಳಿಗೂ ಕಾರಣವಾಗಿದೆ…

About sudina

Check Also

ಸೆಲ್ಫಿ ಮೂಲಕ ಮತ್ತೆ ಟ್ರೋಲ್​ಗೆ ಗುರಿಯಾದ ಫಾತಿಮಾ ಸನಾ ಶೇಖ್​​…!

ಮುಂಬೈ : ದಂಗಲ್​ ಬೆಡಗಿ ಫಾತಿಮಾ ಸನಾ ಶೇಖ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿ ಆಗಿದ್ದಾರೆ. 25 ವರ್ಷದ …

Leave a Reply

Your email address will not be published. Required fields are marked *

error: Content is protected !!