Thursday , December 14 2017
Home / Interval / ಸ್ಫೂರ್ತಿಯ ಸೆಲೆ : ಈ ಸ್ಟಾರ್ ಡೈರೆಕ್ಟರ್​​​, ನಟ ಹೊಟೇಲ್​ನಲ್ಲಿ ಸವರ್ ಆಗಿದ್ದರು

ಸ್ಫೂರ್ತಿಯ ಸೆಲೆ : ಈ ಸ್ಟಾರ್ ಡೈರೆಕ್ಟರ್​​​, ನಟ ಹೊಟೇಲ್​ನಲ್ಲಿ ಸವರ್ ಆಗಿದ್ದರು

ಎಸ್​.ಜೆ.ಸೂರ್ಯ. ದಕ್ಷಿಣ ಭಾರತದ ಸ್ಟಾರ್​ ಡೈರೆಕ್ಟರ್​. ನಟನಾಗಿಯೂ ಇವರು ಸಖತ್ ಹೆಸರು ಮಾಡಿದವರು. ಇಂತಹ ಸೂರ್ಯ ಚೆನ್ನೈಗೆ ಬಂದ ಸಂದರ್ಭದಲ್ಲಿ ಅನುಭವಿಸಿದ್ದ ಕಷ್ಟ ಅಷ್ಟಿಷ್ಟಲ್ಲ. ಶಾಲಾ ದಿನಗಳಲ್ಲಿ ಖ್ಯಾತ ನಟ ಶಿವಾಜಿ ಗಣೇಶನ್ ಅವರನ್ನು ಭೇಟಿಯಾದ ಬಳಿಕ ಇವರಲ್ಲಿ ಹೀರೋ ಆಗುವ ಕನಸು ಚಿಗುರೊಡೆದಿತ್ತು. ಇದೇ ಆಸೆ ಹೊತ್ತು ಚೆನ್ನೈ ಮಹಾನಗರ ಸೇರಿದ ಸೂರ್ಯ ಅವರು ತುಂಬಾ ದಿನಗಳ ಕಷ್ಟದ ಬಳಿಕ ಜೂನಿಯರ್​ ಆರ್ಟಿಸ್ಟ್​ ಆಗಿ ಸೇರಿಕೊಂಡರು. ಈ ಸಂದರ್ಭದಲ್ಲಿ ಇವರು ಹಣಕಾಸಿನ ವಿಷಯದಲ್ಲಿ ತುಂಬಾ ನೊಂದಿದ್ದರು. ಊಟಕ್ಕೂ ದುಡ್ಡಿರಲಿಲ್ಲ. ಹಲವಾರು ದಿನ ಉಪವಾಸವೇ ಇದ್ದು ಬಿಡುತ್ತಿದ್ದರು. ಮನೆಗೆ ಬಾಡಿಗೆ ಕೊಡಲೂ ದುಡ್ಡಿರಲಿಲ್ಲ. ಹೀಗಾಗಿ, ಜೀವನ ನಿರ್ವಹಣೆಗೆ ಇವರು ಹೊಟೇಲ್​ನಲ್ಲಿ ಸವರ್​ ಆಗಿ ಕೆಲಸಕ್ಕೆ ಸೇರಿದರು.

ಇದಾದ ಬಳಿಕ ಅಜಿತ್ ಅಭಿನಯದ ಆಸೈ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗುವ ಅವಕಾಶ ಇವರಿಗೆ ಸಿಕ್ಕಿತ್ತು. ಈ ವೇಳೆ, ಹರಿದ ಬಟ್ಟೆಯೊಂದಿಗೆ ಸ್ಲಿಪರ್ ಹಾಕಿಕೊಂಡಿದ್ದ ಎಸ್​.ಜೆ.ಸೂರ್ಯರನ್ನು ಅಜಿತ್ ಕಂಡಿದ್ದರು. ಆದರೆ, ಸೂರ್ಯ ತುಂಬಾ ಶ್ರಮಜೀವಿ. ಇದನ್ನು ಅಜಿತ್ ಗಮನಿಸಿದ್ದರು. ತಾನು ಸಿನೆಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ ಬಳಿಕ ಸೂರ್ಯಗೆ ಒಂದು ಚಾರ್ನ್ಸ್​ ನೀಡಲೇಬೇಕು ಎಂದು ಅಜಿತ್ ಆಗಲೇ ನಿರ್ಧರಿಸಿದ್ದರು…

ಮನಸ್ಸಿನಲ್ಲಿ ಅಂದುಕೊಂಡಂತೆ ಅಜಿತ್​ ಸೂರ್ಯ ನಿರ್ದೇಶನದ ‘ವಾಲಿ’ ಚಿತ್ರಕ್ಕೆ ಸಹಿ ಮಾಡಿದರು. ಆದರೆ, ಹಣಕಾಸಿನ ಸಮಸ್ಯೆಯಿಂದ ಈ ಚಿತ್ರ 10 ದಿನಕ್ಕೆ ನಿಂತು ಹೋಯ್ತು. ಬಳಿಕ ಹಾಗೂ ಹೀಗೂ ಸಂಪೂರ್ಣಗೊಂಡ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಚಿಂದಿ ಉಡಾಯಿಸಿತು. ದೊಡ್ಡ ಬ್ಲಾಕ್ ಬಸ್ಟರ್​ ಚಿತ್ರವಾದ ವಾಲಿ ಹಲವು ಭಾಷೆಗೆ ರಿಮೇಕ್ ಕೂಡಾ ಆಯ್ತು. ಈ ದಿನಗಳಲ್ಲಿ ಸೂರ್ಯ ಈಗಲೂ ನೆನಪಿಸಿಕೊಳ್ಳುತ್ತಾರೆ. ಅಜಿತ್ ಇಲ್ಲದಿದ್ದರೆ ನಾನಿಂದು ಈ ಮಟ್ಟಕ್ಕೆ ಬರುತ್ತಿರಲಿಲ್ಲ ಎಂಬ ಧನ್ಯತಾ ಮಾತು ಸೂರ್ಯರದ್ದು. ವಾಲಿ ಚಿತ್ರವಾದ ಬಳಿಕ ಅಜಿತ್ ಸೂರ್ಯಗೆ ಒಂದು ಹೊಸ ಕಾರನ್ನೂ ಉಡುಗೊರೆಯಾಗಿ ನೀಡಿದ್ದರಂತೆ.

ಇದಾದ ಬಳಿಕ ತಮಿಳಿನಲ್ಲಿ ಸೂರ್ಯ ಖುಷಿ ಎಂಬ ಚಿತ್ರ ನಿರ್ದೇಶಿಸಿದರು, ಇದು ಕೂಡಾ ಸೂಪರ್ ಹಿಟ್ ಆಯ್ತು. ಈ ಚಿತ್ರದ ತೆಲುಗು ಅವತರಣಿಕೆಯಲ್ಲಿ ಪವನ್ ಕಲ್ಯಾಣ್ ನಟಿಸಿದ್ದರು. ಸೂರ್ಯ ಅವರೇ ಇದನ್ನೂ ನಿರ್ದೇಶಿಸಿದ್ದರು. ಈ ಚಿತ್ರ ಪವನ್ ಕಲ್ಯಾಣ್ ಅವರಿಗೂ ಸಾಕಷ್ಟು ಹೆಸರು ತಂದುಕೊಟ್ಟಿತ್ತು.

ಈ ನಿರ್ದೇಶನದ ಕೆಲಸದೊಂದಿಗೆ ನಟನಾ ಕ್ಷೇತ್ರದಲ್ಲೂ ಸೂರ್ಯ ಮಿಂಚಿದ್ದರು. ಇತ್ತೀಚೆಗೆ ರಿಲೀಸ್ ಆದ ಮಹೇಶ್ ಬಾಬು ನಟನೆಯ ಎ.ಆರ್. ಮುರುಘಾದಾಸ್ ನಿರ್ದೇಶನದ ಸ್ಪೈಡರ್ ಚಿತ್ರದಲ್ಲೂ ಅಭಿನಯಿಸಿದ್ದ ಇವರು ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಒಟ್ಟಿನಲ್ಲಿ, ಸೂರ್ಯ ಅವರ ಛಲ ಮತ್ತು ಶ್ರಮ ಅವರಿಗೆ ಇಂದು ದೊಡ್ಡ ಸ್ಥಾನ ನೀಡಿದೆ. ಇವರ ಜೀವನ ಇತರರಿಗೆ ಮಾದರಿ ಕೂಡಾ ಆಗಿದೆ…

About sudina

Check Also

ಆ ಒಂದು ಕಾರಣಕ್ಕೆ ಸಲ್ಮಾನ್ ಜೂಹಿ ಚಾವ್ಲಾ ಜೊತೆ ನಟಿಸಲೇ ಇಲ್ಲ…!

ಇದು 1988ರ ಸುಮಾರಿನ ಮಾತು. ಬಾಲಿವುಡ್‍ನಲ್ಲಿ `ಖಯಾಮತ್ ದೇ ಖಯಾಮತ್ ತಕ್’ ಬಿಡುಗಡೆಯಾದ ಸಂದರ್ಭ ಅದು. ಅಮೀರ್ ಖಾನ್ ಮತ್ತು …

Leave a Reply

Your email address will not be published. Required fields are marked *

error: Content is protected !!