Thursday , December 14 2017
Home / Sandalwood / ಅಬ್ಬರಿಸುತ್ತಿರುವ ಟಗರು

ಅಬ್ಬರಿಸುತ್ತಿರುವ ಟಗರು

ಟಗರು, ಮೈಯೆಲ್ಲಾ ಪೊಗರು, ಶೀರ್ಷಿಕೆ ಅಂತೆ ಚಿತ್ರ ಟಗರು ಬಿಡುಗಡೆಗೂ ಮುನ್ನ ಭರ್ಜರಿಯಾಗಿ ಕಂಡು ಬಂದಿದೆ, ಎಲ್ಲಿ ಅಂತಿದೀರಾ? ಈ ಟೀಸರ್ ವಿಡಿಯೋ ನೋಡಿ.

ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ಚಿತ್ರ ಟಗರು ಮೊನ್ನೆಯಷ್ಟೇ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಇದೆ ಮೊದಲ ಬಾರಿಗೆ ಒಬ್ಬ ನಾಯಕನ ಅಭಿಮಾನಿ ಬಳಗ ಪೂರ್ತಿ ಕಾರ್ಯಕ್ರಮ ಅಯೋಚಿಸಿತ್ತು. ಬಿಡುಗಡೆ ಆಗಿ 24ಗಂಟೆ ಮೊದಲೇ ಒಂದು ಮುಕ್ಕಾಲು ಲಕ್ಷಕ್ಕಿಂತ ಜಾಸ್ತಿ ಜನ ಈ ವಿಡಿಯೋ ನೋಡಿ ಪ್ರಶಂಶಿಸಿದ್ದಾರೆ. ಇದರಲ್ಲಿ ಗಮನ ಸೆಳೆಯಲು ಹಲವಾರು ವಿಷಯಗಳಿವೆ. ಸುಕ್ಕಾ ಸೂರಿ ನಿರ್ದೇಶನ, ಶಿವಣ್ಣ ಮತ್ತೆ ಲಾಂಗ್ ಹಿಡಿದ್ದಿದ್ದಾರೆ, ಮಹೇಂದ್ರ ಸಿಂಹ ಅವರ ಕ್ಯಾಮೆರಾ ವರ್ಕ್, ಅಷ್ಟೇ ಖದರ್ ಇರೋ ಚರಣ್ ರಾಜ್ ರವರ ಹಿನ್ನಲೆ ಸಂಗೀತ.

ಮೊದಲ ಬಾರಿಗೆ ಧನಂಜಯ್ ವಸಿಷ್ಠ ಒಳಗೂಡಿ ಖಳ ನಟ ಆಗಿದ್ದಾರೆ. ಟೀಸರ್ ವಿಡಿಯೋ ನ ಹಿನ್ನಲೆ ಸಂಗೀತ ಕೂಡ ತಂಡ ಬಿಡುಗಡೆ ಗೊಳಿಸಿದೆ. ಚಿತ್ರ ಶತದಿನ ಪೂರೈಸಲಿ ಅನ್ನೋದು ಎಲ್ಲರ ಆಶಯ.

About superadmin

Check Also

ಹೊಸ ಆಡಿಯೋ ಕಂಪೆನಿ ಹುಟ್ಟು ಹಾಕಲಿರುವ ಪವರ್ ಸ್ಟಾರ್

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​​ ಈಗ ನಟನೆಯ ಜೊತೆ ಜೊತೆ ಹೊಸ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ …

Leave a Reply

Your email address will not be published. Required fields are marked *

error: Content is protected !!