Tuesday , May 22 2018
Home / Film News / ಮನಾಲಿಯಲ್ಲಿ 30 ಕೋಟಿ ಮೌಲ್ಯದ ಮನೆ ಕಟ್ಟಿದ ಸ್ಟಾರ್ ನಟಿ…!

ಮನಾಲಿಯಲ್ಲಿ 30 ಕೋಟಿ ಮೌಲ್ಯದ ಮನೆ ಕಟ್ಟಿದ ಸ್ಟಾರ್ ನಟಿ…!

ಮುಂಬೈ : ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ 30 ಕೋಟಿ ರೂಪಾಯಿ ಮೌಲ್ಯದ ಸ್ವರ್ಗದಂತಹ ಮನೆ ಕಟ್ಟಿದ್ದಾರೆ. ತಮ್ಮ ತವರೂರು ಮನಾಲಿಯಲ್ಲಿ ಈ ಭವ್ಯ ಬಂಗಲೆಯನ್ನು ಕಂಗನಾ ಕಟ್ಟಿದ್ದಾರೆ. ಕ್ವೀನ್ ಚಿತ್ರ ಗೆದ್ದ ತಕ್ಷಣ ಕಂಗನಾ ಇಲ್ಲಿ 10 ಕೋಟಿ ಮೌಲ್ಯದಲ್ಲಿ ಒಂದು ಸುಂದರ ಜಾಗ ಖರೀದಿಸಿದ್ದರು. ಇದಾದ ಬಳಿಕ ಇಲ್ಲೊಂದು ಭವ್ಯ ಬಂಗಲೆ ಕಟ್ಟಲು ಬಯಸಿದ್ದ ಕಂಗನಾ ಅದರಂತೆ ಸುಂದರ ಮನೆಯೊಂದನ್ನು ಕಟ್ಟಿದ್ದು, ಇದರ ಇಂಟೀರಿಯರ್ ಡಿಸೈನ್‍ಗೇ 20 ಕೋಟಿ ಖರ್ಚಾಗಿದೆ ಅಂತ ಹೇಳಲಾಗ್ತಿದೆ. ಸದ್ಯದ ಅಂದಾಜಿನ ಪ್ರಕಾರ ಈ ಮನೆಯ ಒಟ್ಟು ಮೌಲ್ಯ 30 ಕೋಟಿಗೂ ಅಧಿಕ. ಎಂಟು ಬೆಡ್‍ರೂಮ್‍ಗಳುಳ್ಳ ಈ ಮನೆಯಲ್ಲಿ ಐಷಾರಾಮಿ ಸೌಲಭ್ಯಗಳೇ ಇವೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!