Thursday , February 22 2018
Home / Psychology / ಮೊಬೈಲ್ ಇಲ್ಲದೆ ಚಡಪಡಿಸುವುದು ಕೂಡಾ ಒಂದು ಫೋಬಿಯಾ…!

ಮೊಬೈಲ್ ಇಲ್ಲದೆ ಚಡಪಡಿಸುವುದು ಕೂಡಾ ಒಂದು ಫೋಬಿಯಾ…!

ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗ. ಊಟವನ್ನಾದರೂ ಬಿಡುತ್ತಾರೆ. ಮೊಬೈಲ್ ಫೋನ್ ಇಲ್ಲದೆ ನಮ್ಮ ಯುವಕ ಯುವತಿಯರು ಬದುಕುವುದಿಲ್ಲ. ಕೆಲವೊಮ್ಮೆ ಮೊಬೈಲ್​ಗಾಗಿ ಚಡಪಡಿಕೆಯೇ ಶುರುವಾಗುತ್ತದೆ. ಹಾಗಂತ, ಈ ಚಡಪಡಿಕೆ ಒಂದು ಮಿತಿಯಲ್ಲಿ ಇದ್ದರೆ ಓಕೆ. ಅದೇ ಜಾಸ್ತಿ ಆದರೆ ಖಂಡಿತಾ ಒಳ್ಳೆಯದಲ್ಲ. ಅದನ್ನು ಸೈಕೋಲಾಜಿಯಲ್ಲಿ ‘ನೋಮೋ ಫೋಬಿಯಾ’ ಅಂತ ಕರೆಯುತ್ತಾರೆ. ಮೊಬೈಲ್ ಫೋನ್ ಸೆಟ್ ಇಲ್ಲದೆ ಅಥವಾ ಮೊಬೈಲ್ ಸಂಪರ್ಕವೇ ಇಲ್ಲದೆ ಯಮಯಾತನೆ ಅನುಭವಿಸುವ ಘಟ್ಟವೇ ಈ ನೋಮೋ ಫೋಬಿಯಾ. ‘ನೋ ಮೊಬೈಲ್ ಫೋನ್ ಫೋಬಿಯಾ’ ಎಂಬುದು ಈ ನೋಮೋ ಫೋಬಿಯಾದ ವಿಸ್ತೃತ ರೂಪ! 2010ರಲ್ಲಿ ಯುಕೆ ಪೋಸ್ಟ್ ಆಫೀಸ್​ನಲ್ಲಿ ನಡೆಸಿದ ಸರ್ವೇಯಿಂದ ಈ ನೋಮೋ ಫೋಬಿಯಾ ಬೆಳಕಿಗೆ ಬಂದಿದೆ. ಈ ಅಧ್ಯಯನದ ಪ್ರಕಾರ ಸುಮಾರು ಶೇಕಡಾ 54 ರಷ್ಟು ಜನ ತಮಗೆ ನೋಮೋ ಫೋಬಿಯಾದ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಫೋಬಿಯಾದಿಂದ ಬಳಲುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ಬಯಲಾದ ಸತ್ಯ…

 

About sudina

Leave a Reply

Your email address will not be published. Required fields are marked *

error: Content is protected !!