Monday , January 22 2018
Home / Film News / ಸಲ್ಮಾನ್ ಖಾನ್ ಹತ್ಯೆಗೆ ಸಂಚು…?
Buy Bitcoin at CEX.IO

ಸಲ್ಮಾನ್ ಖಾನ್ ಹತ್ಯೆಗೆ ಸಂಚು…?

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಜೀವಕ್ಕೆ ಸಂಚಕಾರ ಇದೆಯಾ…? ಮೊನ್ನೆಯಷ್ಟೇ ಜೋಧ್‍ಪುರ ಕೋರ್ಟ್‍ನಲ್ಲಿ ರೌಡಿ ಶೀಟರ್ ಒಬ್ಬ ಸಲ್ಮಾನ್‍ಗೆ ಬೆದರಿಕೆ ಹಾಕಿದ್ದ. ಇದಾದ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ. `ರೇಸ್ 3′ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ಶಸ್ತ್ರಾಸ್ತ್ರದೊಂದಿಗೆ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ. ಇದು ತಿಳಿದ ತಕ್ಷಣ ಸಲ್ಮಾನ್ ಖಾನ್ ಅವರನ್ನು ಪೊಲೀಸ್ ಭದ್ರತೆಯಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ. ಅಲ್ಲದೆ, ಶೂಟಿಂಗ್ ಕೂಡಾ ನಿಲ್ಲಿಸಲಾಗಿದೆ. ರಾಜಸ್ಥಾನ ಮೂಲದ ಗ್ಯಾಂಗ್‍ಸ್ಟಾರ್‍ನಿಂದ ಸಲ್ಮಾನ್‍ಗೆ ಬೆದರಿಕೆ ಇದೆ ಎಂಬ ಅಂಶವನ್ನು ನಿನ್ನೆಯಷ್ಟೇ ಸಲ್ಲೂ ತಂದೆ ಸಲೀಂ ಖಾನ್ ಸ್ಪಷ್ಟಪಡಿಸಿದ್ದಾರೆ. 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್‍ಪುರ ನ್ಯಾಯಾಲಯಕ್ಕೆ ಬಂದಿದ್ದ ಸಲ್ಮಾನ್‍ಗೆ ಗ್ಯಾಂಗ್‍ಸ್ಟಾರ್ ಲಾರೆನ್ಸ್ ಬಿಶ್ನೋಯಿ ಎಂಬಾತ ಕೊಲ್ಲೋದ್ದಾಗಿ ಬೆದರಿಕೆಯೊಡ್ಡಿದ್ದ. ಬಿಶ್ನೋಯಿ ಸಮುದಾಯಕ್ಕೆ ಕೃಷ್ಣಮೃಗ ಬಹಳ ಪವಿತ್ರ ಪ್ರಾಣಿ. ಈ ಪ್ರಾಣಿಯನ್ನು ಇವರೆಲ್ಲಾ ರಕ್ಷಿಸುತ್ತಾರೆ. ಇದೇ ಸಿಟ್ಟಿನಲ್ಲಿ ಬಿಶ್ನೋಯಿ ಈ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಇದಾದ ಬಳಿಕ ರೇಸ್ ತ್ರಿ ಶೂಟಿಂಗ್ ಸೆಟ್‍ನಲ್ಲಿ ಶಸ್ತ್ರಾಸ್ತ್ರದೊಂದಿಗೆ ಆಗಂತುಕ ಕಾಣಿಸಿಕೊಂಡಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ..

CEX.IO Bitcoin Exchange

About sudina

Check Also

ಒಂದೇ ಫೋಟೋದಲ್ಲಿ ಮಾಜಿ ಪ್ರೇಮಿಗಳಾದ ಐಶ್ವರ್ಯ, ವಿವೇಕ್! : ಸೆಲ್ಫಿ ಕ್ಲಿಕ್ಕಿಸಿದ್ದು ಮಾವ ಅಮಿತಾಭ್…!

ಮುಂಬೈ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಬಾಲಿವುಡ್ ನಟರನ್ನೂ ಭೇಟಿಯಾಗಿದ್ದರು. ಈ ವೇಳೆ, …

Leave a Reply

Your email address will not be published. Required fields are marked *

error: Content is protected !!