Tuesday , May 22 2018
Home / News NOW / 15 ವರ್ಷದ ಹುಡುಗಿಯ ಗ್ಯಾಂಗ್‍ರೇಪ್…! : ಒಡೆದು ಹೋಗಿದೆ ಲಿವರ್, ಶ್ವಾಸಕೋಶ…!

15 ವರ್ಷದ ಹುಡುಗಿಯ ಗ್ಯಾಂಗ್‍ರೇಪ್…! : ಒಡೆದು ಹೋಗಿದೆ ಲಿವರ್, ಶ್ವಾಸಕೋಶ…!

ಹರಿಯಾಣ : ದೇಶದಲ್ಲಿ ಮತ್ತೊಂದು ಭೀಕರ ಗ್ಯಾಂಗ್‍ರೇಪ್ ನಡೆದಿದೆ. 15 ವರ್ಷದ ಹುಡುಗಿಯನ್ನು ಕಿಡ್ನ್ಯಾಪ್ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಬಳಿಕ ಬಾಲಕಿಯನ್ನು ಕೊಂದ ಪಾಪಿಗಳು ಶವವನ್ನು ಕಾಲುವೆಗೆ ಎಸೆದು ಪರಾರಿಯಾಗಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ಶವ ಜಿಂದ್ ಎಂಬಲ್ಲಿ ಅರೆನಗ್ನ ಸ್ಥಿತಿಯಲ್ಲಿ ಕಾಲುವೆಯಲ್ಲಿ ಸಿಕ್ಕಿದೆ.

ಕಳೆದ ವಾರ ಟ್ಯೂಷನ್‍ಗೆಂದು ಹೋಗಿದ್ದ ಬಾಲಕಿ ಕಾಣೆಯಾಗಿದ್ದಳು. ಇದೀಗ ಈಕೆಯ ಶವ ಕಾಲುವೆಯಲ್ಲಿ ಪತ್ತೆಯಾಗಿದ್ದು, ಗುಪ್ತಾಂಗ ಸೇರಿದಂತೆ ದೇಹದ ಬಹುಭಾಗದಲ್ಲಿ ಗಾಯದ ಗುರುತುಗಳಾಗಿವೆ. ಚಿತ್ರಹಿಂಸೆ ನೀಡಿ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಗೊತ್ತಾಗಿದೆ. ಮೂರರಿಂದ ನಾಲ್ಕು ಜನ ಈ ಕೃತ್ಯವೆಸಗಿದ್ದಾರೆ ಎಂದು ಶಂಕಿಸಲಾಗಿದೆ. ಅದೂ ಅಲ್ಲದೆ, ಈ ಪಾಪಿಗಳು ಹುಡುಗಿ ತಪ್ಪಿಸಿಕೊಳ್ಳಬಾರದೆಂದು ಆಕೆಯ ಎದೆಯ ಭಾಗದಲ್ಲಿ ಕುಳಿತಿದ್ದರಿಂದ ಆಕೆಯ ಶ್ವಾಸಕೋಶ ಹಾಗೂ ಲಿವರ್ ಒಡೆದು ಹೋಗಿದೆÀ. ಈ ಘಟನೆಯಿಂದ ಈ ಹರಿಯಾಣ ಬೆಚ್ಚಿಬಿದ್ದಿದ್ದು, ಸೂಕ್ತ ತನಿಖೆ ನಡೆಸಿ ಅಪರಾಧಿüಗಳಿಗೆ ತಕ್ಕ ಶಿಕ್ಷೆ ನೀಡೋದಾಗಿ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಭರವಸೆ ನೀಡಿದ್ದಾರೆ.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!