Friday , April 20 2018
Home / Film News / ಸಲ್ಮಾನ್, ಶಿಲ್ಪಾ ಶೆಟ್ಟಿಗೆ ಮತ್ತೆ ಸಮನ್ಸ್…!

ಸಲ್ಮಾನ್, ಶಿಲ್ಪಾ ಶೆಟ್ಟಿಗೆ ಮತ್ತೆ ಸಮನ್ಸ್…!

ಮುಂಬೈ : ವಾಲ್ಮೀಕಿ ಸಮುದಾಯದ ಭಾವನೆಗೆ ಧಕ್ಕೆಯಾಗುವಂತಹ ಪದ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಶಿಲ್ಪಾ ಶೆಟ್ಟಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಆಗಿದೆ. ರಾಜಸ್ಥಾನದ ಚಾರೂ ಜಿಲ್ಲೆಯ ಎಸ್‍ಪಿ ಹುಕ್ಕಾಮ್ ಸಿಂಗ್ ಈ ಸಮನ್ಸ್ ಜಾರಿ ಮಾಡಿದ್ದಾರೆ. ಇವರಲ್ಲದೆ ಚಿತ್ರ ನಿರ್ಮಾಪಕ ಕೋಮಲ್ ನಹ್ತಾ ವಿರುದ್ಧವೂ ಸಮನ್ಸ್ ಜಾರಿ ಆಗಿದೆ.

`ಭಂಗಿ’ ಪದವನ್ನು ಆಕ್ಷೇಪಾರ್ಹ ರೀತಿಯಲ್ಲಿ ಇವರಿಬ್ಬರು ಬಳಸಿದ್ದಾರೆ ಎಂಬುದು ಆರೋಪ. ಸಲ್ಮಾನ್ ಖಾನ್ ತನ್ನ ಟೈಗರ್ ಝಿಂದಾ ಹೇ ಚಿತ್ರದ ಪ್ರಚಾರದ ವೇಳೆ ತನ್ನ ಡ್ಯಾನ್ಸಿಂಗ್ ಸ್ಕಿಲ್ ಬಗ್ಗೆ ಹೇಳಿಕೊಳ್ಳುವಾಗ ಇಂತಹ ಮಾತುಗಳನ್ನಾಡಿದ್ದರು. ಇನ್ನು, ಶಿಲ್ಪಾ ಶೆಟ್ಟಿ ತಾನು ಮನೆಯಲ್ಲಿ ಯಾವ ರೀತಿ ಇರುತ್ತೇನೆ ಎಂದು ವಿವರಿಸುವ ಸಂದರ್ಭದಲ್ಲಿ ಪದೇ ಪದೇ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!