Thursday , June 21 2018
ಕೇಳ್ರಪ್ಪೋ ಕೇಳಿ
Home / Gossip / ಮತ್ತೆ ಒಂದಾಗ್ತಾರಂತೆ ಹೃತಿಕ್ ಸುಸೈನೆ…

ಮತ್ತೆ ಒಂದಾಗ್ತಾರಂತೆ ಹೃತಿಕ್ ಸುಸೈನೆ…

ಮುಂಬೈ : ಬಾಲಿವುಡ್ ಸ್ಟಾರ್ ದಂಪತಿ ಹೃತಿಕ್ ಮತ್ತು ಸುಸೈನೆ ವಿಚ್ಛೇದನದ ವಿಚಾರ ಎಲ್ಲರಿಗೂ ಗೊತ್ತಿರುವಂತಹದ್ದೇ. ಆದರೆ, ಇದೀಗ ಬಂದಿರುವ ಸುದ್ದಿ ಪ್ರಕಾರ ವಿಚ್ಛೇದನದಿಂದ ದೂರವಾಗಿರುವ ಈ ಮಾಜಿ ದಂಪತಿ ಮತ್ತೆ ಒಂದಾಗುತ್ತಿದ್ದಾರಂತೆ. ಈ ಸುದ್ದಿ ಈ ಹಿಂದೆಯೇ ಇತ್ತಾದರೂ ಇತ್ತೀಚಿನ ದಿನಗಳಲ್ಲಿ ತುಂಬಾ ಜೋರಾಗಿಯೇ ಕೇಳಿ ಬರುತ್ತಿವೆ.

ವಿಚ್ಛೇದನ ಪಡೆದ ಆರಂಭದಲ್ಲಿ ಮಕ್ಕಳಿಗಾಗಿ ಇವರಿಬ್ಬರು ಒಟ್ಟು ಸೇರುತ್ತಿದ್ದರು. ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗೀಗ ಸುಸೈನೆ ಮತ್ತು ಹೃತಿಕ್ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಸುಸೈನೆ ಕೂಡಾ ಹೃತಿಕ್ ಜೊತೆ ಹೆಚ್ಚಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ದಂಪತಿಯ ಮುನಿಸು ದೂರವಾಗುತ್ತಿರುವ ಲಕ್ಷಣ ಎಂದೇ ಹೇಳಲಾಗುತ್ತಿದೆ. ಅದೂ ಅಲ್ಲದೆ, ಇವರ ಸ್ನೇಹಿತರು ಕೂಡಾ ಇದೇ ಮಾತನ್ನು ಹೇಳುತ್ತಿದ್ದಾರೆ. ಮತ್ತೆ ಒಂದಾಗಲು ಹೃತಿಕ್ ಮತ್ತು ಸುಸೈನೆ ಬಯಸಿದ್ದು, ಈ ಕುರಿತ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದು ಇವರಿಬ್ಬರನ್ನು ಹತ್ತಿರದಿಂದ ಬಲ್ಲ ಸ್ನೇಹಿತರ ಮಾತು. ಮತ್ತೊಂದು ಕಡೆ ಇದು ಸುಳ್ಳು ಎಂಬ ಮಾತೂ ಇದೆ. ಮಕ್ಕಳಿಗೋಸ್ಕರ ಇವರಿಬ್ಬರು ಈಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಅದರ ಹೊರತಾಗಿ ಇಬ್ಬರದ್ದೂ ಪ್ರತ್ಯೇಕ ಜೀವನ ಅಂತಾರೆ ಹೃತಿಕ್ ಖಾಂದಾನ್‍ನ ಕೆಲವರು. ಅದೇನೆ ಇದ್ದರೂ ಈ ಜೋಡಿ ಮತ್ತೆ ಒಂದಾಗಲಿ, ಮುನಿಸು ಮರೆತು ಬಾಳಲಿ ಎಂಬುದು ಇವರ ಬಹುತೇಕ ಅಭಿಮಾನಿಗಳ ಆಶಯ…

About sudina

Check Also

ಬಾಲಿವುಡ್ ನಟಿಯೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಡೇಟಿಂಗ್…?

ಮುಂಬೈ : ಕ್ರಿಕೆಟಿಗರು ಹಾಗೂ ಸಿನೆಮಾ ನಟಿಯರ ನಡುವೆ ಪ್ರೇಮಾಂಕುರವಾಗುವುದು ಹೊಸದಲ್ಲ. ವಿರಾಟ್ ಅನುಷ್ಕಾ, ಯುವರಾಜ್ ಹಜೆಲ್, ಜಾಹೀರ್ ಖಾನ್ …

Leave a Reply

Your email address will not be published. Required fields are marked *

error: Content is protected !!