Thursday , November 15 2018
ಕೇಳ್ರಪ್ಪೋ ಕೇಳಿ
Home / Film News / ಈ ಬಾಲಿವುಡ್ ಹೀರೋ ವಿಶ್ವದ ಮೋಸ್ಟ್ ಹ್ಯಾಂಡ್‍ಸಮ್ ನಟ..

ಈ ಬಾಲಿವುಡ್ ಹೀರೋ ವಿಶ್ವದ ಮೋಸ್ಟ್ ಹ್ಯಾಂಡ್‍ಸಮ್ ನಟ..

ಮುಂಬೈ : ಬಾಲಿವುಡ್ ನಟ ಹೃತಿಕ್ ರೋಷನ್ ವಿಶ್ವದ ಮೋಸ್ಟ್ ಹ್ಯಾಂಡ್‍ಸಮ್ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 44 ವರ್ಷದ ಹೃತಿಕ್ ಹಾಲಿವುಡ್‍ನ ಖ್ಯಾತನಾಮರೆಲ್ಲರನ್ನೂ ಹಿಂದಿಕ್ಕಿ ಈ ಬಾರಿ ಈ ಪಟ್ಟಕ್ಕೇರಿದ್ದಾರೆ. ವಲ್ರ್ಡ್‍ಸ್ ಟಾಪ್‍ಮೋಸ್ಟ್ ಡಾಟ್ ಕಾಮ್ ಈ ಪಟ್ಟಿಯನ್ನು ಪ್ರಕಟಿಸಿದ್ದು, ಹಾಲಿವುಡ್‍ನ ಸ್ಟಾರ್ ನಟರನ್ನೆಲ್ಲಾ ಹಿಂದಕ್ಕೆ ಹಾಕಿ ಹೃತಿಕ್ ಈ ಸ್ಥಾನವನ್ನು ಪಡೆದಿದ್ದಾರೆ ಎಂದು ಬರೆದುಕೊಂಡಿದೆ. ಅಭಿಮಾನಿ ವರ್ಗ, ಪ್ರಖ್ಯಾತಿ, ಹಿಟ್ ಸಿನೆಮಾಗಳು ಹೀಗೆ ವಿವಿಧ ವಿಚಾರಗಳು ಈ ಸ್ಥಾನದ ಮಾನದಂಡವಾಗಿದೆ. ಇನ್ನು, ಬಾಲಿವುಡ್‍ನ ಮತ್ತೋರ್ವ ನಟ ಸಲ್ಮಾನ್ ಖಾನ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಸಲ್ಲು ಬಿಟ್ಟು ಬಾಲಿವುಡ್‍ನ ಯಾವೊಬ್ಬ ನಟನೂ ಟಾಪ್ ಟೆನ್ ಲಿಸ್ಟ್‍ನಲ್ಲಿ ಸ್ಥಾನ ಪಡೆದುಕೊಂಡಿಲ್ಲ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!