ಚೆನ್ನೈ : ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನಾತಾರಾ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಯಾವ ಸಂದರ್ಭದಲ್ಲೂ ಇವರಿಬ್ಬರು ಸತಿಪತಿಗಳಾಗಬಹುದು. ಹೀಗಾಗಿ, ನಯನಾತಾರಾ ಹೊಸ ಬದುಕಿನ ಸಿದ್ಧತೆಯಲ್ಲಿ ಇದ್ದಾರೆ. ಇದಕ್ಕಾಗಿಯೇ, ಹೊಸ ಚಿತ್ರ ಒಪ್ಪಿಕೊಳ್ಳುವಾಗ ನಯನಾ ಹೊಸ ಕಂಡೀಷನ್ ಹಾಕುತ್ತಿದ್ದಾರೆ. ಈ ಕಂಡೀಷನ್ ಕೇಳಿ ಪಡ್ಡೆ ಹೈಕ್ಲು ಹೊಟ್ಟೆ ಉರ್ಕೊಳ್ತಿದ್ದಾರಂತೆ…!
ನಯನಾ ಹಾಕಿರುವ ಹೊಸ ಷರತ್ತು ಎಂದರೆ ತಾನು ನಟಿಸುವ ಚಿತ್ರದಲ್ಲಿ ರೊಮ್ಯಾನ್ಸ್ ಸೀನ್ ಇರಬಾರದು. ಇಂಟಿಮೇಟ್ ಸೀನ್ ಇದ್ದರೆ ನಾನು ನಟಿಸಲ್ಲ ಎಂದು ನಯನಾತಾರಾ ಹೇಳಿದ್ದಾರಂತೆ. ಅದೂ ಅಲ್ಲದೆ, ಚಿತ್ರದ ಪ್ರಮೋಷನ್ಗೆ ಬರುವಂತೆ ನನ್ನನ್ನು ಒತ್ತಾಯ ಮಾಡಬಾರದು ಎಂಬ ಕಂಡೀಷನ್ ಕೂಡಾ ನಯನಾ ಕಡೆಯಿಂದ ಬಂದಿದೆಯಂತೆ. ನಯನಾ ಹೊಸ ಷರತ್ತಿಗೆ ಇತ್ತೀಚೆಗೆ ರಿಲೀಸ್ ಆದ ತೆಲುಗಿನ ಜೈ ಸಿಂಹ ಸಾಕ್ಷಿ. ಯಾಕೆಂದರೆ, ಈ ಚಿತ್ರದಲ್ಲಿ ನಟ ಬಾಲಯ್ಯ ನಯನಾತಾರರನ್ನು ಮುಟ್ಟುವ ಸಿಂಗಲ್ ಫ್ರೆಮ್ ಕೂಡಾ ಇಲ್ಲ…