Sunday , July 22 2018
ಕೇಳ್ರಪ್ಪೋ ಕೇಳಿ
Home / Gossip / ಈ ಏಪ್ರಿಲ್‍ಗೆ ಸೋನಂ ಕಪೂರ್ ಮದ್ವೆಯಾಗ್ತಾರಂತೆ… : ಅಕ್ಷಯ್ ಕೊಟ್ಟ ಸುಳಿವೇನು ಗೊತ್ತಾ…?

ಈ ಏಪ್ರಿಲ್‍ಗೆ ಸೋನಂ ಕಪೂರ್ ಮದ್ವೆಯಾಗ್ತಾರಂತೆ… : ಅಕ್ಷಯ್ ಕೊಟ್ಟ ಸುಳಿವೇನು ಗೊತ್ತಾ…?

ಮುಂಬೈ : ನಾವಿಬ್ಬರು ಪ್ರೀತಿಸುತ್ತಿಲ್ಲ ಅಂತ ಹೇಳ್ತಾ ಹೇಳ್ತಾನೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಮದ್ವೆನೇ ಆಗಿ ಬಿಟ್ಟಿದ್ದಾರೆ. ಇದೀಗ ಇದೇ ರೀತಿ ನಾವಿಬ್ಬರು ಪ್ರೇಮಿಗಳಲ್ಲ ಎಂದು ಸುತ್ತಾಡುತ್ತಿರುವ ಮತ್ತೊಂದು ಜೋಡಿಯ ಮದ್ವೆಯ ವಿಚಾರ ಎದ್ದು ನಿಂತಿದೆ. ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಅವರ ಬಹುಕಾಲದ ಗೆಳೆಯ ಆನಂದ್ ಅಹುಜಾ ಮದ್ವೆ ಸಿದ್ಧತೆಯಲ್ಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ.

ಬಹಳ ದಿನಗಳಿಂದ ಪ್ರೀತಿಯಲ್ಲಿ ಮುಳುಗಿರುವ ಈ ಜೋಡಿ ತಮ್ಮ ಪ್ರೀತಿಯನ್ನು ಇದುವರೆಗೆ ಎಲ್ಲೂ ಹೇಳಿಕೊಂಡಿಲ್ಲ. ಹಾಗಂತ, ಅದು ಗುಟ್ಟಾಗಿಯೂ ಏನು ಉಳಿದಿಲ್ಲ. ಸದ್ಯ ಸುಳಿದಾಡುತ್ತಿರುವ ಸುದ್ದಿ ಏನಪ್ಪಾ ಅಂದರೆ ಇದೇ ಏಪ್ರಿಲ್‍ನಲ್ಲಿ ಇವರಿಬ್ಬರು ಸತಿಪತಿಗಳಾಗುತ್ತಿದ್ದಾರಂತೆ. ಇದಕ್ಕೆ ಸರಿಯಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಸೋನಂ ಕಪೂರ್ ಅವರ ಮದ್ವೆ ಪ್ಲಾನ್ ಬಗ್ಗೆ ಬಾಯಿ ಬಿಡಿಸಲು ನೋಡಿದ್ದಾರೆ. ಕುಕ್ಕಿಂಗ್ ಮಿಷನ್ ಲಾಂಚ್ ಸಂದರ್ಭದಲ್ಲಿ ಹಾಜರಿದ್ದ ಸೋನಂಗೆ ಅಕ್ಷಯ್, `ನೀವು ಇದೇ ವರ್ಷ ಮದ್ವೆಯಾಗೋದಾದರೆ ನಾನು ನಿಮಗೆ ಈ ಕುಕ್ಕಿಂಗ್ ಮಿಷನ್ ಅನ್ನು ಗಿಫ್ಟ್ ಕೊಡುತ್ತೇನೆ. ಆಗ ನೀವು ನಿಮ್ಮ ಗಂಡನಿಗೆ ಅಡುಗೆ ಮಾಡಬಹುದು ಅಥವಾ ನಿಮ್ಮ ಗಂಡ ನಿಮಗೆ ಅಡುಗೆ ಮಾಡಿ ಕೊಡಬಹುದು’ ಎಂದು ನಗೆ ಚಟಾಕಿ ಹಾರಿಸಿದ್ದರು…

ಅಕ್ಷಯ್ ಹೀಗೆ ಹೇಳೋದಕ್ಕೂ ಒಂದು ಕಾರಣವಿದೆ. ಸೋನಂ ಮತ್ತು ಆನಂದ್ ಅಕ್ಷಯ್‍ಗೆ ತುಂಬಾ ಆಪ್ತರು. ಅಕ್ಷಯ್ ಕುಮಾರ್ ಅವರ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲೂ ಇವರಿಬ್ಬರು ಭಾಗವಹಿಸಿದ್ದರು… ಹೀಗಾಗಿ, ಸುಮ್ನೆ ಸೋನಂ ಮದ್ವೆ ವಿಷಯ ಬಾಯಿ ಬಿಡ್ತಾರಾ ನೋಡೋಣ ಅಂತ ಅಕ್ಕಿ ಇಲ್ಲಿ ಒಂದು ಪ್ರಯತ್ನ ಪಟ್ಟಿದ್ದಾರೆ… ಆದರೆ, ಸೋನಂ ನಗುತ್ತಾ ಸುಮ್ಮನಿದ್ದಿಂದ ಇವರ ಮದ್ವೆ ವಿಚಾರಕ್ಕೂ ಇನ್ನೂ ಗಾಸಿಪ್ ರೂಪದಲ್ಲೇ ಇದೆ…

About sudina

Check Also

ನ್ಯೂಯಾರ್ಕ್​ನಲ್ಲಿ ಪೇಮ ಪತಂಗಗಳ ಸುತ್ತಾಟ…

ನ್ಯೂಯಾರ್ಕ್ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಗಾಯಕ ನಿಕ್ ಜೊನಾಸ್ ನಡುವೆ ಪ್ರೀತಿ ಪ್ರೇಮದಂತಹ ಸುಂದರ …

Leave a Reply

Your email address will not be published. Required fields are marked *

error: Content is protected !!