Saturday , February 16 2019
ಕೇಳ್ರಪ್ಪೋ ಕೇಳಿ
Home / Gossip / ಕಮಲ್ ಹಾಸನ್ ಹೊಸ ಪಕ್ಷ ಶುರುವಾಗೋದು ಯಾವಾಗ ಗೊತ್ತಾ…?

ಕಮಲ್ ಹಾಸನ್ ಹೊಸ ಪಕ್ಷ ಶುರುವಾಗೋದು ಯಾವಾಗ ಗೊತ್ತಾ…?

ಚೆನ್ನೈ : ತಮಿಳುನಾಡಿನಲ್ಲಿ ಈಗ ಸೂಪರ್‍ಸ್ಟಾರ್‍ಗಳ ರಾಜಕೀಯ ಎಂಟ್ರಿಯ ಹವಾ ಜೋರಾಗಿದೆ. ತಲೈವಾ ರಜನಿಕಾಂತ್ ಈಗಾಗಲೇ ರಾಜಕೀಯ ಎಂಟ್ರಿಯ ಸುಳಿವು ಕೊಟ್ಟು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದು, ಉಲಗನಾಯಕ ಕಮಲ್ ಹಾಸನ್ ಕೂಡಾ ಇದೇ ಹಾದಿಯಲ್ಲಿದ್ದಾರೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಫೆಬ್ರವರಿ 21ಕ್ಕೆ ಕಮಲ್ ತಮ್ಮ ಹೊಸ ಪಕ್ಷ ಘೋಷಣೆ ಮಾಡ್ತಾರಂತೆ. ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಿರುವ ಕಮಲ್ ಹಾಸನ್ ಅಂದೇ ತಮ್ಮ ಹೊಸ ಪಕ್ಷ ಮತ್ತು ಅದರ ದ್ಯೇಯಗಳನ್ನು ಪ್ರಕಟಿಸುತ್ತಾರೆ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ತಮ್ಮ ಹುಟ್ಟೂರು ರಾಮನಾಥಪುರಂನಿಂದಲೇ ಕಮಲ್ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ.

About sudina

Check Also

ತಾಯ್ತನದ ಖುಷಿಯಲ್ಲಿ ಸಾನಿಯಾ ಮಿರ್ಜಾ… : ಅಕ್ಟೋಬರ್ ಗೆ ಮನೆಗೆ ಹೊಸ ಅತಿಥಿ…

ಹೈದರಾಬಾದ್ : ಟೆನಿಸ್ ತಾರೆ ಸಾನಿಯಾ ಮಿರ್ಜಾ ಖ್ಯಾತಿಯಲ್ಲಿ ಯಾವುದೇ ಬಾಲಿವುಡ್ ತಾರೆಗಿಂತ ಕಡಿಮೆ ಇಲ್ಲ. ತನ್ನ ಪ್ರತಿಭೆಯ ಮೂಲಕವೇ …

Leave a Reply

Your email address will not be published. Required fields are marked *

error: Content is protected !!