Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / 100 ಕೋಟಿಯಷ್ಟು ಬ್ಯಾನ್ ಆದ ನೋಟು ಪತ್ತೆ…!

100 ಕೋಟಿಯಷ್ಟು ಬ್ಯಾನ್ ಆದ ನೋಟು ಪತ್ತೆ…!

ಲಕ್ನೋ : 500, 1000 ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಆಗಿ ವರ್ಷ ಕಳೆದು ಹೋಗಿದೆ. ಆದರೂ ಹಳೇ ನೋಟುಗಳು ಪತ್ತೆಯಾಗುವುದು ಮಾತ್ರ ನಿಂತಿಲ್ಲ. ಕಾನ್ಪುರದಲ್ಲಿ ನಿರ್ಮಾಣ ಹಂತದ ಮನೆಯಲ್ಲಿ 100 ಕೋಟಿ ಮೌಲ್ಯದ ಹಳೇ ನೋಟುಗಳು ಸಿಕ್ಕಿವೆ. ನೋಟ್ ಬ್ಯಾನ್ ಬಳಿಕ ಇದೇ ಮೊದಲ ಬಾರಿಗೆ ಸಿಕ್ಕ ದೊಡ್ಡ ಮೊತ್ತದ ನಗದು ಇದಾಗಿದೆ. ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‍ಐಎ) ಹಾಗೂ ಉತ್ತರ ಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಬೃಹತ್ ಮೊತ್ತದ ಹಳೇ ನೋಟುಗಳು ಪತ್ತೆಯಾಗಿವೆ. ಕಾನ್ಪುರದ ಸ್ವರೂಪ್‍ನಗರದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಈ ಹಣವೆಲ್ಲಾ ಸಿಕ್ಕಿದ್ದು, ತನಿಖೆ ಚುರುಕಿನಿಂದ ಸಾಗಿದೆ.

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!