Monday , February 19 2018
Home / Film News / `ಭಾರತ್’ಗಾಗಿ 10 ವರ್ಷ ಕಿರಿಯನಾಗ್ತಾರಂತೆ ಸಲ್ಮಾನ್…!
Buy Bitcoin at CEX.IO

`ಭಾರತ್’ಗಾಗಿ 10 ವರ್ಷ ಕಿರಿಯನಾಗ್ತಾರಂತೆ ಸಲ್ಮಾನ್…!

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಕಾಂಬಿನೇಷನ್‍ಗೆ ಈಗ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸುಲ್ತಾನ್, ಟೈಗರ್ ಜಿಂದಾ ಹೇ ಚಿತ್ರದ ಮೂಲಕ ಗಮನ ಸೆಳೆದಿರುವ ಈ ಜೋಡಿ ಇದೀಗ `ಭಾರತ್’ ಎಂಬ ಮತ್ತೊಂದು ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಲಿದೆ. `ಭಾರತ್’ ಚಿತ್ರವನ್ನು ಸಲ್ಮಾನ್ ಬಾವ ಅತುಲ್ ಅಗ್ನಿಹೋತ್ರಿ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಈ ಚಿತ್ರಕ್ಕಾಗಿ ಸಲ್ಮಾನ್ ಸಖತ್ ವರ್ಕೌಟ್ ಮಾಡ್ತಿದ್ದಾರೆ.

ನಿರ್ದೇಶಕ ಅಲಿ ಪ್ರಕಾರ, ಈ ಚಿತ್ರದಲ್ಲಿ ಸಲ್ಮಾನ್‍ರನ್ನು ಡಿಫ್ರೆಂಟ್ ಆಗಿ ತೋರಿಸಲು ಪ್ರಯತ್ನಿಸಲಾಗಿದೆಯಂತೆ. ಇನ್ನೂ 10 ವರ್ಷ ಕಿರಿಯನಂತೆ ಸಲ್ಮಾನ್ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಸಿನಿ ಜೀವನದ ಆರಂಭದ ದಿನಗಳು ಅಂದರೆ ಪಕ್ಕಾ `ಮೈನೇ ಪ್ಯಾರ್ ಕಿಯಾ’ ಲುಕ್‍ನಲ್ಲಿ ಇಲ್ಲಿ ಸಲ್ಮಾನ್ ಇರಲಿದ್ದಾರಂತೆ. ಸದ್ಯ ಈ ಬಗೆಗಿನ ಪ್ರಯತ್ನಗಳು ನಡೆಯುತ್ತಿವೆ. ಇದರಲ್ಲಿ ನಾವು ಎಷ್ಟು ಸಫಲರಾಗುತ್ತೇವೆ ಎಂದು ನಮ್ಮ ಇನ್ನಷ್ಟು ಅಧ್ಯಯನದಿಂದ ಗೊತ್ತಾಗಲಿದೆ ಎಂದು ನಿರ್ದೇಶಕ ಅಲಿ ಹೇಳಿದ್ದಾರೆ. ಸಲ್ಲೂ ಈಗಲೂ ಸುಂದರವಾಗಿ ಕಾಣ್ತಾರೆ. ಇವರು ಸ್ವಲ್ಪ ಎಫರ್ಟ್ ಹಾಕಿದರೂ ಇದು ಸಾಧ್ಯ. ಸಲ್ಲೂಗೆ ತೂಕ ಇಳಿಸೋದಕ್ಕೆ ಹೇಳಿದ್ದೇನೆ. ಇನ್ನೂ ನಾಲ್ಕೈದು ವಾರಗಳಲ್ಲಿ ಸಲ್ಮಾನ್ ಲುಕ್ಕೇ ಬೇರೆಯದಾಗಲಿದೆ ಎಂಬುದು ಅಲಿ ವಿಶ್ವಾಸ.

CEX.IO Bitcoin Exchange

About sudina

Check Also

ಸುಪ್ರೀಂಕೋರ್ಟ್​ ತೀರ್ಪು ಬೇಸರ ತರಿಸಿದೆ : ರಜನಿಕಾಂತ್

ಚೆನ್ನೈ : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಬೇಸರ ತರಿಸಿದೆ ಎಂದು ಸೂಪರ್ …

Leave a Reply

Your email address will not be published. Required fields are marked *

error: Content is protected !!