Tuesday , May 22 2018
Home / Psychology / ಅತಿಯಾದ ಸೆಲ್ಫಿ ಕ್ರೇಜ್‍ ಮಾನಸಿಕ ಸಮಸ್ಯೆ ತಂದೊಡ್ಡುತ್ತದೆ…!

ಅತಿಯಾದ ಸೆಲ್ಫಿ ಕ್ರೇಜ್‍ ಮಾನಸಿಕ ಸಮಸ್ಯೆ ತಂದೊಡ್ಡುತ್ತದೆ…!

ಈಗೇನಿದ್ದರೂ ಡಿಜಿಟಲ್ ಜಮಾನ… ಎಲ್ಲಾ ಅಂಗೈಯಲ್ಲೇ ಸಿಗುತ್ತದೆ… ಅದರಲ್ಲೂ ಮೊಬೈಲ್. ಈಗೀನ ಮೊಬೈಲ್‍ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇರುತ್ತವೆ. ಇನ್ನು, ಈ ಮೊಬೈಲ್‍ನಲ್ಲಿ ಕ್ಯಾಮೆರಾ ಬಂದ ಮೇಲಂತೂ ಕೇಳೋದೇ ಬೇಡ. ನಮ್ಮ ಯುವ ಜನ್ರಿಗೆ ಫೋಟೋ ತೆಗೆಯೋದೇ ಒಂದು ಕೆಲಸ. ಅದರಲ್ಲೂ ಸೆಲ್ಫಿ ಕ್ರೇಜ್ ಈಗೀಗ ಹೆಚ್ಚು. ಆದ್ರೆ, ಒಂದು ಮಾತಿದೆ ಅತಿಯಾದರೆ ಅಮೃತವೂ ವಿಷ ಅಂತ. ಈಗ ಅದೇ ಆಗಿದೆ. ಅತಿಯಾದ ಸೆಲ್ಫಿ ಕ್ರೇಜ್ ಮಾನಸಿಕ ಸಮಸ್ಯೆಯನ್ನೂ ತಂದೊಡ್ಡುತ್ತದೆ ಎಂಬುದು ಅಧ್ಯಯನದಲ್ಲಿ ಕಂಡು ಕೊಂಡ ಸತ್ಯ. ಸೆಲ್ಫಿ ಗೀಳು ಕೆಲವರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನೇ ಹಾಳು ಗೆಡವಿದೆ. ಪ್ರಮುಖ ಆಸ್ಪತ್ರೆಗಳಲ್ಲಿ ಈ ಸೆಲ್ಫಿ ಕ್ರೇಜ್‍ನಿಂದ ಖಿನ್ನತೆಗೊಳಗಾದವರು ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲವೂ ಹಿತಮಿತವಾಗಿದ್ದರೆ ಚೆಂದ. ಅದೇ ರೀತಿ ಸೆಲ್ಫಿ ಕೂಡಾ. ಅತೀ ಹೆಚ್ಚು ಸೆಲ್ಫಿ ತೆಗೆಯುವ ಯುವಕ, ಯುವತಿಯರು ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿ ಲೈಕ್, ಕಮೆಂಟ್‍ಗಾಗಿ ಕಾಯುತ್ತಿರುತ್ತಾರೆ. ಆದರೆ, ಅವರ ನಿರೀಕ್ಷಿತ ಮಟ್ಟಕ್ಕೆ ಲೈಕ್, ಕಮೆಂಟ್‍ಗಳು ಬರದೇ ಇದ್ದರೆ ಮಾನಸಿಕವಾಗಿ ಕುಗ್ಗುತ್ತಾರೆ. ಮತ್ತೆ ಮತ್ತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಕ್ಕೋ, ಸ್ನೇಹಿತರಿಗೋ ತೋರಿಸಿ ಮೆಚ್ಚುಗೆ ಗಳಿಸಲು ಯತ್ನಿಸುತ್ತಾರೆ. ಆದರೆ, ಇಲ್ಲೂ ಅವರ ನಿರೀಕ್ಷೆ ನಿಜವಾಗದಿದ್ದರೆ ಖಿನ್ನತೆಗೂ ಒಳಗಾಗುವ ಅಪಾಯಗಳಿರುತ್ತವೆ. ಇನ್ನು ಕೆಲವರಿಗೆ ತಾವು ಫೋಟೋದಲ್ಲಿ ಚೆನ್ನಾಗಿ ಕಾಣುತ್ತಿಲ್ಲ ಎಂಬ ಕೊರಗು ಕೂಡಾ ಬಾಧಿಸಲು ಆರಂಭಿಸಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಈ ರೀತಿ ಸಮಸ್ಯೆಯಿಂದ ಬಳಲುತ್ತಿರುವ ಯುವಕ ಯುವತಿಯರು ಕೆಲವೊಮ್ಮೆ ಕಾಲೇಜಿಗೂ ಹೋಗದೆ ಒಂಟಿಯಾಗಿ ಇರುವ ಉದಾಹರಣೆಗಳೂ ಇವೆ. ಒಂದು ದಿನಕ್ಕೆ ಆರು ಮತ್ತು ಅದಕ್ಕಿಂತ ಹೆಚ್ಚು ಸೆಲ್ಫಿ ತೆಗೆಯುವುದರಿಂದ ಕೆಲವರಿಗೆ ಮಾನಸಿಕವಾಗಿ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ ಎಂಬುದನ್ನು ಮನಶಾಸ್ತ್ರಜ್ಞರು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ.

About sudina

Leave a Reply

Your email address will not be published. Required fields are marked *

error: Content is protected !!