Friday , September 21 2018
ಕೇಳ್ರಪ್ಪೋ ಕೇಳಿ
Home / Film News / ಪ್ಲೀಸ್ ಇರಿಟೇಟ್ ಮಾಡ್ಬೇಡಿ… : ಕೃಷ್ಣ ಸುಂದರಿ ಬಿಪಶಾ ಮನವಿ…

ಪ್ಲೀಸ್ ಇರಿಟೇಟ್ ಮಾಡ್ಬೇಡಿ… : ಕೃಷ್ಣ ಸುಂದರಿ ಬಿಪಶಾ ಮನವಿ…

ಮುಂಬೈ : ಕೃಷ್ಣ ಸುಂದರಿ ಬಿಪಶಾ ಬಸು ಈಗ ಮತ್ತೆ ಕಿರಿಕಿರಿ ಅನುಭವಿಸ್ತಿದ್ದಾರೆ. ಅದಕ್ಕೆ ಕಾರಣ, ವದಂತಿ. ಈ ಹಿಂದೆ ಹಲವು ಬಾರಿ ಕಾಟ ಕೊಟ್ಟಿದ್ದ `ಬಿಪಶಾ ಗರ್ಭಿಣಿ’ ಎಂಬಂತಹ ಸುದ್ದಿ ಮತ್ತೊಮ್ಮೆ ಹಬ್ಬಿದೆ. ಇದರಿಂದ ಸಖತ್ ಇರಿಟೇಟ್ ಆಗಿರೋ ಬಿಪಶಾ ಟ್ವಿಟರ್‍ನಲ್ಲಿ ತನ್ನ ಅಸಮಾಧಾನವನ್ನು ಹೊರಹಾಕಿದ್ದಾರೆ.


`ನಾನು ಯಾವಾಗಲೂ ನನ್ನ ಬ್ಯಾಗನ್ನು ನನ್ನ ತೊಡೆ ಮೇಲೆಯೇ ಇಟ್ಟುಕೊಳ್ಳುತ್ತೇನೆ. ಇದನ್ನು ನೋಡಿದ ಕೆಲ ಮಾಧ್ಯಮಗಳು ನಾನು ಗರ್ಭಿಣಿ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಗರ್ಭಿಣಿ ಅಲ್ಲ. ನಮಗೆ ತೊಂದರೆ ಕೊಡದೆ ಸುಮ್ಮನಿರಿ. ನಮಗೆ ಬೇಕಾದಾಗ ನಾನು ಗರ್ಭಿಣಿ ಆಗುತ್ತೇನೆ’ ಎಂದು ಹೇಳಿಕೊಂಡಿರುವ ಬಿಪಶಾ ದಯವಿಟ್ಟು ತೊಂದರೆ ಕೊಡಬೇಡಿ ಎಂದು ಬೇಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಬಿಪಶಾ ಕಾರಿನಲ್ಲಿ ಹೋಗುವಾಗ ತಮ್ಮ ಬ್ಯಾಗನ್ನು ತೊಡೆ ಮೇಲೆ ಇಟ್ಟುಕೊಂಡಿದ್ದರು. ಇದೇ ಮತ್ತೆ ಬಿಪಶಾ ಗರ್ಭಿಣಿ ಎಂಬ ಸುದ್ದಿ ಹುಟ್ಟಿಕೊಳ್ಳಲು ಕಾರಣವಾಗಿತ್ತು! 2016 ರಲ್ಲಿ ಬಿಪಶಾ ಕರಣ್ ಸಿಂಣ್ ಗ್ರೋವರ್‍ರನ್ನು ಮದ್ವೆಯಾಗಿದ್ದರು.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!