Monday , February 19 2018
Home / Film News / ಅಕ್ಷಯ್ ಕುಮಾರ್ ತಲೆ ಬೋಳಿಸಿಕೊಂಡಿದ್ದೇಕೆ…?  ಇಲ್ಲಿದೆ ಅಸಲಿ ಕಾರಣ…
Buy Bitcoin at CEX.IO

ಅಕ್ಷಯ್ ಕುಮಾರ್ ತಲೆ ಬೋಳಿಸಿಕೊಂಡಿದ್ದೇಕೆ…?  ಇಲ್ಲಿದೆ ಅಸಲಿ ಕಾರಣ…

ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಲೆ ಬೋಳಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಕ್ಷಯ್ ಈ ಗೆಟಪ್ ನೋಡಿದ ಎಲ್ಲರೂ ಅರೇ ಅಕ್ಷಯ್​ಗೆ ಏನಾಯ್ತು ಅಂತ ಮಾತಾಡಿಕೊಳ್ಳಲು ಆರಂಭಿಸಿದ್ದರು. ಕೆಲವರು ಅಕ್ಷಯ್ ತಲೆ ಕೂದಲು ಉದುರುತ್ತಿದ್ದು, ಇದೇ ಕಾರಣಕ್ಕೆ ಚಿಕಿತ್ಸೆ ಪಡೆಯುವ ಸಲುವಾಗಿ ಕೂದಲು ತೆಗೆದಿದ್ದರು ಎಂದು ಮಾತನಾಡಿಕೊಳ್ಳುತ್ತಿದ್ದರು. ಇದಷ್ಟೇ ಅಲ್ಲದೆ ಇನ್ನೇನೋ ಕತೆಗಳೆಲ್ಲಾ ಹುಟ್ಟಿಕೊಂಡಿದ್ದವು. ಅಕ್ಷಯ್​ ಕೂಡಾ ತಮ್ಮ ಬೋಳು ತಲೆಯನ್ನು ಮುಚ್ಚಿಕೊಂಡು ಸುತ್ತಾಡುತ್ತಾ ಸುಸ್ತಾಗಿದ್ದರು.

ಆದರೆ, ಈಗ ಅಕ್ಷಯ್ ಬೋಳು ತಲೆ ಹಿಂದಿನ ಅಸಲಿ ಕಾರಣ ಗೊತ್ತಾಗಿದೆ. ಅಕ್ಷಯ್ ತಮ್ಮ ಮುಂದಿನ ಪ್ರಾಜೆಕ್ಟ್​ ಗಾಗಿ ತಲೆ ಬೋಳಿಸಿಕೊಂಡಿದ್ದಾರೆ. ಅಕ್ಷಯ್ ಮುಂದಿನ ಪ್ರಾಜೆಕ್ಟ್  ಕೇಸರಿ. ಇದು 1897ರ ಸುಮಾರಿಗೆ ಕತೆ. ಐತಿಹಾಸಿಕ ಕತೆಯನ್ನು ಇಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಸಿಖ್ ಸೈನಿಕರು ಹಾಗೂ ಬ್ರಿಟಿಷರ ನಡುವೆ ನಡೆಯುವ ಕದನದ ಕತೆಯೇ ಕೇಸರಿ ಚಿತ್ರದ ಕತೆ. 2019ರ ಹೋಲಿ ವೇಳೆಗೆ ಈ ಚಿತ್ರ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

CEX.IO Bitcoin Exchange

About sudina

Check Also

ಸುಪ್ರೀಂಕೋರ್ಟ್​ ತೀರ್ಪು ಬೇಸರ ತರಿಸಿದೆ : ರಜನಿಕಾಂತ್

ಚೆನ್ನೈ : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಬೇಸರ ತರಿಸಿದೆ ಎಂದು ಸೂಪರ್ …

Leave a Reply

Your email address will not be published. Required fields are marked *

error: Content is protected !!