Tuesday , May 22 2018
Home / Film News / ಹೃದಯಗೆದ್ದ ಗೆಳೆಯರಿಗೆ ದುನಿಯಾ ವಿಜಿ ನಮನ

ಹೃದಯಗೆದ್ದ ಗೆಳೆಯರಿಗೆ ದುನಿಯಾ ವಿಜಿ ನಮನ

ಬೆಂಗಳೂರು : ದುನಿಯಾ ವಿಜಿ ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ, ಹುಟ್ಟುಹಬ್ಬ ಆಚರಿಸುವುದಕ್ಕೂ ಮೊದಲು ವಿಜಿ ಮೊದಲು ಅಗಲಿದ ತಮ್ಮ ಗೆಳೆಯರಾದ ಅನಿಲ್ ಮತ್ತು ಉದಯ್ ಅವರ ಸಮಾಧಿ ಸ್ಥಳಕ್ಕೆ ಹೋಗಿ ನಮನ ಸಲ್ಲಿಸಿದರು. ಬನಶಂಕರಿಯಲ್ಲಿರುವ ಸ್ಮಶಾನಕ್ಕೆ ಭೇಟಿ ನೀಡಿದ ವಿಜಿ ಅಲ್ಲಿರುವ ಅನಿಲ್ ಮತ್ತು ಉದಯ್ ಸಮಾಧಿಗೆ ಹೂಗಳನ್ನು ಇಟ್ಟು ನಮನ ಸಲ್ಲಿಸಿದ್ದಾರೆ.
ಮಾಸ್ತಿಗುಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆದಿದ್ದ ದುರಂತದಲ್ಲಿ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದರು. ಹೆಲಿಕಾಪ್ಟರ್‍ನಿಂದ ಹಾರುವ ಸ್ಟಂಟ್ ಮಾಡುವ ಸಂದರ್ಭದಲ್ಲಿ ವಿಧಿ ಇವರಿಬ್ಬನ್ನು ಬರಸೆಳೆದಿತ್ತು. ಈ ಘಟನೆಗೆ ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!