Tuesday , November 20 2018
ಕೇಳ್ರಪ್ಪೋ ಕೇಳಿ
Home / Interval / ನಟ ಗೋವಿಂದರನ್ನು ರೂಮಿನಲ್ಲಿ ಕೂಡಿ ಹಾಕಿದ್ದ ಆಫೀಸ್ ಬಾಯ್…!

ನಟ ಗೋವಿಂದರನ್ನು ರೂಮಿನಲ್ಲಿ ಕೂಡಿ ಹಾಕಿದ್ದ ಆಫೀಸ್ ಬಾಯ್…!

ಅದು ನಟ ಗೋವಿಂದ ಚಿತ್ರರಂಗದಲ್ಲಿ ಕಷ್ಟ ಪಡುತ್ತಿದ್ದ ದಿನಗಳು. ಈ ವೇಳೆ, ನಿರ್ಮಾಪಕ ಪ್ರಾಣ್​ಲಾಲ್​ ಮೆಹ್ತಾ ಅವರ ‘ಲವ್ 86’ ಚಿತ್ರಕ್ಕಾಗಿ ಎರಡನೇ ನಾಯಕ ಬೇಕೆಂಬ ವಿಷಯ ಗೋವಿಂದಗೆ ಗೊತ್ತಾಗಿತ್ತು. ಚಿತ್ರದ ಮೊದಲ ನಾಯಕನಾಗಿ ರೋಹನ್ ಕಪೂರ್​ರನ್ನು ಅಂತಿಮ ಮಾಡಲಾಗಿತ್ತು. ಹೀಗಾಗಿ, ಗೋವಿಂದ ತಮ್ಮ ಫೋಟೋಗಳನ್ನೆಲ್ಲಾ ಹಿಡ್ಕೊಂಡು ಪ್ರಾಣ್​ಲಾಲ್​ ಅವರ ಕಚೇರಿಗೆ ಹೋಗಿದ್ದರು. ಈ ವೇಳೆ, ಕಚೇರಿಯಲ್ಲಿ ಇದ್ದುದ್ದು ಆಫೀಸ್​ ಬಾಯ್​ ಅಶೋಕ್​ ಮಾತ್ರ. ಆಗ ಅಶೋಕ್ ‘ಸಾಹೇಬ್ರು ಮನೆಗೆ ಹೋಗಿದ್ದಾರೆ’ ಎಂದು ಗೋವಿಂದಗೆ ಹೇಳಿದ್ದ. ಈ ವೇಳೆ, ತುಂಬಾ ಬೇಸರಗೊಂಡ ಗೋವಿಂದ ಅಶೋಕ್​ಗೆ ಕಾಡಿ ಬೇಡೋದಕ್ಕೆ ಶುರು ಮಾಡಿದ್ದರು. ‘ಹೇಗಾದರೂ ಮಾಡಿ ಪ್ರಾಣ್​ಲಾಲ್​ ಅವರನ್ನು ವಾಪಸ್ ಕರ್ಕೊಂಡು ಬನ್ನಿ’ ಎಂಬ ವಿನಂತಿ ಅದು. ಈ ವಿನಂತಿ, ಉತ್ಸಾಹ, ಛಾನ್ಸ್ ಪಡೆಯಬೇಕು ಎಂಬ ಛಲ ಕಂಡು ಅಶೋಕ್​ಗೆ ಮನಸ್ಸು ಕರಗಿತ್ತು. ಆದರೆ, ಅಪರಿಚಿತ ಗೋವಿಂದನರನ್ನು ಇಬ್ಬರನ್ನೇ ಬಿಟ್ಟು ಹೋಗುವುದು ಹೇಗೆ? ಈ ಪ್ರಶ್ನೆಯನ್ನು ಸ್ವತಃ ಗೋವಿಂದ ಮುಂದೆಯೇ ಇಟ್ಟಿದ್ದ ಅಶೋಕ್. ’ಅಲ್ಲಾ ಮಾರಾಯ. ನಾನು ಸಾಹೇಬ್ರನ್ನು ಕರ್ಕೊಂಡು ಬಂದಾಗ ನೀನು ಇಲ್ಲಿ ಇದ್ದ ವಸ್ತುಗಳನ್ನೆಲ್ಲಾ ಕದ್ಕೊಂಡು ಹೋದ್ರೆ ಏನ್ ಮಾಡೋದು‘ ಅಂತ. ಅದಕ್ಕೆ ಗೋವಿಂದ ಇನ್ನಷ್ಟು ದೈನ್ಯನಾಗಿ ‘ಸ್ವಾಮೀ ನಿಮಗೆ ನನ್ನ ಮೇಲೆ ಅಷ್ಟು ಅನುಮಾನಗಳಿದ್ದರೆ ನಿಮ್ಮ ಕಚೇರಿಯಲ್ಲಿ ನನ್ನನ್ನು ಕೂಡಿ ಹಾಕಿ ನೀವು ಸಾಹೇಬ್ರ ಮನೆಗೆ ಹೋಗಿ’ ಎಂದು ಹೇಳುತ್ತಾರೆ. ಈ ಐಡಿಯಾ ಅಶೋಕ್​ಗೂ ಸರಿ ಅನ್ಸಿತು. ತಡ ಮಾಡದೆ ಗೋವಿಂದರನ್ನು ತನ್ನ ಕಚೇರಿಯಲ್ಲಿ ಕೂಡಿ ಹಾಕಿ ಬೀಗವನ್ನು ಕಿಸೆಯಲ್ಲಿ ಹಾಕಿ ಪ್ರಾಣ್​ಲಾಲ್ ಅವರ ಮನೆಗೆ ಹೋಗಿದ್ದ ಅಶೋಕ್. ಇತ್ತ, ಪ್ರಾಣ್ ಲಾಲ್ ಅವರ ಮನೆಯಲ್ಲಿ ಚಿತ್ರದ ನಿರ್ದೇಶಕ ಇಸ್ಮಾಯಿಲ್ ಶ್ರಾಫ್ ಕೂಡಾ ಇದ್ದರು. ಮನೆಗೆ ಬಂದ ಅಶೋಕ್ ‘ಸಾರ್ ನಿಮ್ಮನ್ನು ನೋಡಲು ಯಾರೋ ಒಬ್ಬ ಹುಡುಗ ಬಂದಿದ್ದಾನೆ. ಅವನನ್ನು ನಾನು ಕಚೇರಿಯಲ್ಲಿ ಕೂಡಿ ಹಾಕಿದ್ದೇನೆ’ ಎಂದು ಹೇಳ್ತಾನೆ. ಇದನ್ನು ಕೇಳಿ ಇಬ್ಬರಿಗೂ ಶಾಕ್. ತಕ್ಷಣ ಇಬ್ಬರೂ ಕಚೇರಿಗೆ ಬಂದರು. ಬೀಗ ತೆಗೆಸಿದರು. ಗೋವಿಂದ ಎದುರು ನಿಂತಿದ್ದರು. ತನ್ನ ನಟನೆಯ ಆಸೆಯನ್ನು ಇಬ್ಬರ ಮುಂದೆಯೂ ಹೇಳಿ ತಂದಿದ್ದ ಫೋಟೋಗಳನ್ನು ತೋರಿಸಿದರು. ಈ ಫೋಟೋ ನಿರ್ದೇಶಕ, ನಿರ್ಮಾಪಕರಿಗೆ ಖುಷಿ ಆಯ್ತು. ತಕ್ಷಣ, ಇವರಿಬ್ಬರು ತಮ್ಮ ಚಿತ್ರಕ್ಕೆ ಗೋವಿಂದರನ್ನು ಫೈನಲ್ ಮಾಡಿದ್ರು. ಹೀಗೆ, ಗೋವಿಂದ ತನ್ನ ಸಿನಿಪಯಣ ಆರಂಭಿಸಿದರು. ಈ ಪಯಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾತ ಆಫೀಸ್ ಬಾಯ್ ಅಶೋಕ್. ಹೀಗಾಗಿ, ಗೋವಿಂದ ಸ್ಟಾರ್ ಆದ ಮೇಲೆ ಇದೇ ಅಶೋಕ್​ನನ್ನು ಗೋವಿಂದ ತನ್ನ ಸಹಾಯಕನನ್ನಾಗಿ ನೇಮಿಸಿದರು.

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!