Monday , July 23 2018
ಕೇಳ್ರಪ್ಪೋ ಕೇಳಿ
Home / Gossip / ತಾಯ್ತನದ ಖುಷಿಯಲ್ಲಿ ಪ್ರೀತಿ ಝಿಂಟಾ…? ಯಾವುದು ನಿಜ…?

ತಾಯ್ತನದ ಖುಷಿಯಲ್ಲಿ ಪ್ರೀತಿ ಝಿಂಟಾ…? ಯಾವುದು ನಿಜ…?

ಮುಂಬೈ : ಮೊನ್ನೆಯಷ್ಟೇ ಕೃಷ್ಣಸುಂದರಿ ಬಿಪಶಾ ಬಸು ಗರ್ಭಿಣಿ ಎಂಬ ಸುದ್ದಿ ದೊಡ್ಡ ಮಟ್ಟದಲ್ಲೇ ಹಬ್ಬಿತ್ತು. ಇದೀಗ, ಇಂತಹದ್ದೇ ಸುದ್ದಿಗೆ ಮತ್ತೋರ್ವ ಬಾಲಿವುಡ್ ನಟಿ ಪ್ರೀತಿ ಝಿಂಟಾ ವಸ್ತುವಾಗಿದ್ದಾರೆ. ಪ್ರೀತಿ ಗರ್ಭಿಣಿ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಹಬ್ಬಲು ಕಾರಣ ಈ ಫೋಟೋ.
ಮುಂಬೈನ ಹ್ಯಾಂಗ್‍ಔಟ್ ಪ್ಲೇಸ್‍ಗೆ ಬಂದಿದ್ದ ಪ್ರೀತಿ ಲೂಸ್ ಆದ ಬಟ್ಟೆ ಧರಿಸಿದ್ದರು. ಈ ಲೂಸ್ ಔಟ್‍ಫಿಟ್ ಅನ್ನು ಕಂಡ ಕೆಲವರು ಪ್ರೀತಿ ಗರ್ಭಿಣಿ ಅಂತ ಸುದ್ದಿ ಹಬ್ಬಿಸಿದ್ದಾರೆ. ಅದೂ ಅಲ್ಲದೆ, ಪ್ರೀತಿ ತಮ್ಮ ಹೊಟ್ಟೆಯನ್ನು ಬಲವಂತವಾಗಿ ಮುಚ್ಚುವ ಪ್ರಯತ್ನ ಮಾಡುತ್ತಿದ್ದರು ಎಂದು ಕೂಡಾ ಹೇಳಲಾಗುತ್ತಿದ್ದು, ಇವೆಲ್ಲಾ ಪ್ರೀತಿ ತಾಯ್ತಾನದ ಖುಷಿ ಅನುಭವಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬುವುದಕ್ಕೆ ಕಾರಣವಾಗಿದೆ. ಆದರೆ, ಈ ಬಗ್ಗೆ ಪ್ರೀತಿ ಕಡೆಯಿಂದಾಗಲಿ ಅವರ ಕುಟುಂಬದ ಕಡೆಯಿಂದಾಗಲಿ ಸ್ಪಷ್ಟನೆ ಬಂದಿಲ್ಲ. ಹೀಗಾಗಿ, ಅಲ್ಲಿ ತನಕ ಈ ವಿಷಯಕ್ಕೆ ಗಾಸಿಪ್ ರೂಪವೇ ಇರಲಿದೆ.

About sudina

Check Also

ನ್ಯೂಯಾರ್ಕ್​ನಲ್ಲಿ ಪೇಮ ಪತಂಗಗಳ ಸುತ್ತಾಟ…

ನ್ಯೂಯಾರ್ಕ್ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಗಾಯಕ ನಿಕ್ ಜೊನಾಸ್ ನಡುವೆ ಪ್ರೀತಿ ಪ್ರೇಮದಂತಹ ಸುಂದರ …

Leave a Reply

Your email address will not be published. Required fields are marked *

error: Content is protected !!