ಮುಂಬೈ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಬಾಲಿವುಡ್ ನಟರನ್ನೂ ಭೇಟಿಯಾಗಿದ್ದರು. ಈ ವೇಳೆ, ಬಾಲಿವುಡ್ ದಿಗ್ಗಜ ಅಮಿತಾಭ್ ಸೆಲ್ಫಿ ಕ್ಲಿಕ್ಕಿಸಿ ಈ ನೆನಪನ್ನು ಇನ್ನಷ್ಟು ಶಾಶ್ವತವನ್ನಾಗಿಸಿದ್ದಾರೆ. ಇದರ ಜೊತೆಗೆ ಇಲ್ಲಿ ಇನ್ನೊಂದು ವಿಶೇಷತೆಯೂ ಇದೆ. ಅದೇನೆಂದರೆ, ಬಹಳ ವರ್ಷದ ಬಳಿಕ ಈ ಫೋಟೋದಲ್ಲಿ ಮಾಜಿ ಪ್ರೇಮಿಗಳು ಕಾಣಿಸಿಕೊಂಡಿದ್ದಾರೆ…! ಅದು ಬೇರೆ ಯಾರೂ ಅಲ್ಲ. ಅಮಿತಾಭ್ ಸೊಸೆ ಐಶ್ವರ್ಯ ಹಾಗೂ ಅವರ ಮಾಜಿ ಪ್ರಿಯಕರ ವಿವೇಕ್ ಓಬೇರಾಯ್.
ಬಾಲಿವುಡ್ನ ಪ್ರೇಮ್ ಕಹಾನಿ ಗೊತ್ತಿರುವವರಿಗೆ ಐಶ್ ವಿವೇಕ್ ಪ್ರೇಮಕತೆಯೂ ಗೊತ್ತಿದೆ. (Read also : ವಿವೇಕ್ ಒಬೇರಾಯ್ಗೆ ಫಿಲ್ಮ್ನಲ್ಲಿ ಛಾನ್ಸ್ ತಪ್ಪಲು ಸಲ್ಮಾನ್ ಕಾರಣ…! : ಇದು ಐಶ್ವರ್ಯ ಲವ್ ಸ್ಟೋರಿ ಎಫೆಕ್ಟ್…!)ಆದರೆ, ಬದಲಾದ ಸನ್ನಿವೇಶದಲ್ಲಿ ಈ ಜೋಡಿ ಬೇರ್ಪಟ್ಟು ಬೇರೆ ಬೇರೆ ಮದ್ವೆಯಾದರು. ಇದಾದ ಬಳಿಕ ಇವರು ಮುಖಾಮುಖಿಯಾಗಿದ್ದು ಬಹಳ ಕಡಿಮೆ. ಆದರೆ, ಇದೀಗ, ಈ ಫೋಟೋದಲ್ಲಿ ಐಶ್ ಮತ್ತು ವಿವೇಕ್ ಮತ್ತೆ ಕಾಣಿಸಿಕೊಂಡಿದ್ದಾರೆ. ಇಸ್ರೇಲ್ ಪ್ರಧಾನಿ ಅವರನ್ನು ಭೇಟಿಯಾದ ಖುಷಿ ಈ ಫೋಟೋದಲ್ಲಿ ಇಬ್ಬರಲ್ಲಿಯೂ ಕಾಣುತ್ತಿದೆ. ಅದೂ ಅಲ್ಲದೆ, ಈ ಸೆಲ್ಫಿಯನ್ನು ಇಸ್ರೇಲ್ ಪ್ರಧಾನಿ ಅವರು ಕೂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
What an incredible pleasure it was meeting you sir! You are an amazing ambassador for Israel, you won our hearts today! Looking fwd to visiting your beautiful country and experiencing the rich Israeli culture very soon! @netanyahu @IsraeliPM #NetanyahuInIndia pic.twitter.com/7Rff4JLpaK
— Vivek Anand Oberoi (@vivek_oberoi) January 18, 2018
Will my Bollywood selfie beat @TheEllenShow Hollywood selfie at the Oscars? @SrBachchan @juniorbachchan @rajcheerfull @imbhandarkar @vivek_oberoi @ pic.twitter.com/v1r0GIhKLy
— Benjamin Netanyahu (@netanyahu) January 18, 2018