Monday , May 21 2018
Home / Film News / `ದೀಪಿಕಾ, ಬನ್ಸಾಲಿಯನ್ನು ಜೀವಂತ ಸುಡುತ್ತೇವೆ’

`ದೀಪಿಕಾ, ಬನ್ಸಾಲಿಯನ್ನು ಜೀವಂತ ಸುಡುತ್ತೇವೆ’

ಮುಂಬೈ : ಅದ್ಯಾಕೋ ಪದ್ಮಾವತ್ ಚಿತ್ರದ ಬಗೆಗಿನ ವಿವಾದ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ವಿವಿಧ ರಾಜ್ಯಗಳು ಚಿತ್ರಕ್ಕೆ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗಳಿಸಿದ ಬಳಿಕವೂ ವಿವಾದ ಬಗೆಹರಿದಿಲ್ಲ. ಜನವರಿ 25 ರಂದು ತೆರೆ ಕಾಣಬೇಕಾಗಿರುವ ಪದ್ಮಾವತ್‍ಗಿರುವ ಭೀತಿ ಇನ್ನೂ ಕಡಿಮೆಯಾಗಿಲ್ಲ. ರಜಪೂತ್ ಕರ್ಣಿ ಸೇನಾ ಪದ್ಮಾವತ್ ಚಿತ್ರದ ವಿರುದ್ಧದ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿವೆ.

ಈ ಹಿಂದೆ ಚಿತ್ರ ಬಿಡುಗಡೆಯಾದರೆ ದೀಪಿಕಾ ಪಡುಕೋಣೆ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಮೂಗು ಕತ್ತರಿಸ್ತೀವಿ ಎಂದು ಕರ್ಣಿ ಸೇನಾ ನಾಯಕರು ಹೇಳಿದ್ದು ಸುದ್ದಿಯಾಗಿತ್ತು. ಇದೀಗ ಇಂತಹದ್ದೇ ಮತ್ತೊಂದು ಸುದ್ದಿ ಬಂದಿದೆ. ಒಂದೊಮ್ಮೆ ಚಿತ್ರ ಬಿಡುಗಡೆಯಾದರೆ ದೀಪಿಕಾ ಮತ್ತು ಬನ್ಸಾಲಿ ಅವರನ್ನು ಜೀವಂತವಾಗಿ ಸುಡುತ್ತೇವೆ ಎಂದು ಕರ್ಣಿ ಸೇನಾದ ಮತ್ತೊಬ್ಬ ಮುಖಂಡರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಚಾನೆಲ್ ಒಂದರ ಚರ್ಚೆಯ ಸಂದರ್ಭದಲ್ಲಿ ಠಾಕೂರ್ ಅಭಿಷೇಕ್ ಸೋಮ್ ಈ ಬೆದರಿಕೆಯೊಡ್ಡಿದ್ದಾರೆ ಅಂತ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿದೆ. ಇನ್ನೊಂದ್ಕಡೆ, ಕರ್ಣಿ ಸೇನಾದ ಅಧ್ಯಕ್ಷ ಸುಖ್‍ದೇವ್ ಸಿಂಗ್ ಮಾತನಾಡಿ ಚಿತ್ರಕ್ಕೆ ನಿಷೇಧ ಹೇರುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸೋದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

About sudina

Check Also

ಸ್ಥಳೀಯ ಪ್ರತಿಭೆಗಳಿಗೆ ಇಲ್ಲ ಮನ್ನಣೆ, ನನ್ನ ಪತಿಗೂ ಈ ನೋವಿತ್ತು : ದಿವಂಗತ ಗಾಯಕ ಎಲ್​.ಎನ್.ಶಾಸ್ತ್ರಿ ಪತ್ನಿ ಬೇಸರ

ಬೆಂಗಳೂರು : ಕನ್ನಡ ಸಿನಿಲೋಕದಲ್ಲಿ ಗಾಯಕ ಎಲ್.ಎನ್.ಶಾಸ್ತ್ರಿ ತನ್ನದೇ ಆ ಛಾಪನ್ನು ಮೂಡಿಸಿದ್ದರು. ಹಲವಾರು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದವರು ಎಲ್.ಎನ್.ಶಾಸ್ತ್ರಿ. …

Leave a Reply

Your email address will not be published. Required fields are marked *

error: Content is protected !!