Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಹುಡುಗಿಯರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ : ಈ ವರ್ಷ ಮದ್ವೆಯಾಗ್ತಾರಂತೆ ಬಾಹುಬಲಿ ಪ್ರಭಾಸ್!

ಹುಡುಗಿಯರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ : ಈ ವರ್ಷ ಮದ್ವೆಯಾಗ್ತಾರಂತೆ ಬಾಹುಬಲಿ ಪ್ರಭಾಸ್!

ಹೈದರಾಬಾದ್ : ಬಾಹುಬಲಿ ಪ್ರಭಾಸ್ ಎಲ್ಲರ ಮೆಚ್ಚಿನ ನಟ. ಅದರಲ್ಲೂ ಹುಡುಗಿಯರಿಗೆ ಪ್ರಭಾಸ್ ಕಂಡರೆ ಕೊಂಚ ಜಾಸ್ತಿಯೇ ಇಷ್ಟ. ಆದರೆ, ಹೀಗೆ ಪ್ರಭಾಸ್‍ನನ್ನು ಮೆಚ್ಚಿಕೊಳ್ಳಿ ಹೆಣ್ಮಕ್ಕಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ ಬಂದಿದೆ. ಪ್ರಭಾಸ್ ಈ ವರ್ಷ ಮದ್ವೆಯಾಗ್ತಾರಂತೆ. ಸಂದರ್ಶನವೊಂದರಲ್ಲಿ ಪ್ರಭಾಸ್ ಮಾವ ಕೃಷ್ಣಮ್ ರಾಜು ಈ ವಿಷಯ ಹೇಳಿದ್ದಾರೆ. `ಈ ವರ್ಷ ಪ್ರಭಾಸ್ ಮದುವೆ ಆಗ್ತಾರೆ. ಪ್ರಭಾಸ್ ಕೂಡಾ ದಾಂಪತ್ಯಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ’ ಎಂದು ಹೇಳಿದ್ದಾರೆ.

ಲವ್ ಮ್ಯಾರೇಜಾ? ಅರೇಂಜ್ ಮ್ಯಾರೇಜಾ? : ಪ್ರಭಾಸ್ ಮದ್ವೆ ವಿಷಯ ಬಂದಾಗ ಉದ್ಭವಿಸುವ ಮತ್ತೊಂದು ಪ್ರಶ್ನೆ ಅಂದರೆ ಪ್ರಭಾಸ್‍ರದ್ದು ಲವ್ ಮ್ಯಾರೇಜಾ ಅಥವಾ ಅರೆಂಜ್ ಮ್ಯಾರೇಜಾ ಅನ್ನುವುದು. ಯಾಕೆಂದರೆ, ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಇಬ್ಬರೂ ಪ್ರೀತಿಸ್ತಿದ್ದಾರೆ ಎಂಬುದು ಬಹಳ ಹಳೆಯ ಸುದ್ದಿ. ಗಾಸಿಪ್ ಕಾಲಂಗಳಲ್ಲಿ ಈಗಲೂ ಇವರಿಬ್ಬರ ಹೆಸರು ಬರುತ್ತದೆ. ಆದರೆ, ಈ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಹೀಗಾಗಿ, ಪ್ರಭಾಸ್ ಮದ್ವೆ ವಿಚಾರ ಬಂದಾಗಲೆಲ್ಲಾ ಅನುಷ್ಕಾ ಹೆಸರು ಕೂಡಾ ಬಂದು ನಿಲ್ಲುತ್ತದೆ. ಈಗಲೂ ಅನುಷ್ಕಾ ಹೆಸರು ಓಡಾಡುತ್ತಿದೆ. ಆದರೆ. ಪ್ರಭಾಸ್ ಬಾಳ ಸಂಗಾತಿಯಾಗಿ ಬರುವವರು ಯಾರು ಎಂಬುದಕ್ಕೆ ಇನ್ನೂ ಒಂದಷ್ಟು ದಿನ ಕಾಯಲೇಬೇಕು.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!