Friday , September 21 2018
ಕೇಳ್ರಪ್ಪೋ ಕೇಳಿ
Home / Film News / ಕಾಲೇಜು ದಿನಗಳ ಮೆಲುಕು : ರಂಗಿತರಂಗ ಸಹೋದರರ `ರಾಜರಥ’ದ ಕಾಲೇಜು ಹಾಡು ರಿಲೀಸ್

ಕಾಲೇಜು ದಿನಗಳ ಮೆಲುಕು : ರಂಗಿತರಂಗ ಸಹೋದರರ `ರಾಜರಥ’ದ ಕಾಲೇಜು ಹಾಡು ರಿಲೀಸ್

ಬೆಂಗಳೂರು : ರಂಗಿತರಂಗ ಚಿತ್ರದ ಮೂಲಕ ಹೊಸ ಭರವಸೆ ಮೂಡಿಸಿದ್ದ ನಿರೂಪ್, ಅನೂಪ್ ಭಂಡಾರಿ ಸಹೋದರರು ಈಗ ರಾಜರಥ ಚಿತ್ರದ ಮೂಲಕ ಮತ್ತೊಂದು ಸಲ ತೆರೆಗೆ ಬರಲು ಸಿದ್ಧವಾಗುತ್ತಿದ್ದಾರೆ. ಈ ರಾಜರಥ ಈಗಾಗಲೇ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ನಿರೀಕ್ಷೆ ತಣಿಸುವ ಸಲುವಾಗಿ ರಾಜರಥದ ಮೊದಲ ಹಾಡು ರಿಲೀಸ್ ಆಗಿದೆ.

ಈ ಹಾಡು ಕಾಲೇಜು ದಿನಗಳನ್ನು ನೆನಪಿಸುತ್ತದೆ. ಕಾಲೇಜು ದಿನಗಳ ತುಂಟಾಟ, ಪ್ರೀತಿ ಪ್ರೇಮದ ಆಕರ್ಷಣೆ ಈ ಹಾಡಿನಲ್ಲಿ ಎದ್ದು ಕಾಣುತ್ತದೆ. ಮೊನ್ನೆ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು ಅವತರಣಿಕೆಯ ಹಾಡು ಕೂಡಾ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!