Monday , August 20 2018
ಕೇಳ್ರಪ್ಪೋ ಕೇಳಿ
Home / Film News / ಸ್ನೇಹಿತೆಯ ಮದುವೆಯಲ್ಲಿ ಕಣ್ಣೀರಿಟ್ಟ ನಟಿ ಅಲಿಯಾ ಭಟ್ : ಅದಕ್ಕೆ ಕಾರಣ ಅಭಿಮಾನಿಗಳು…!

ಸ್ನೇಹಿತೆಯ ಮದುವೆಯಲ್ಲಿ ಕಣ್ಣೀರಿಟ್ಟ ನಟಿ ಅಲಿಯಾ ಭಟ್ : ಅದಕ್ಕೆ ಕಾರಣ ಅಭಿಮಾನಿಗಳು…!

ಮುಂಬೈ : ಅಲಿಯಾ ಭಟ್ ಬಾಲಿವುಡ್‍ನ ಬಬ್ಲಿ ಬಬ್ಲಿ ನಟಿ. ಮೊನ್ನೆ ಅಲಿಯಾ ತನ್ನ ಪ್ರಾಣ ಸ್ನೇಹಿತೆ ಕೃಪಾ ಮೆಹ್ತಾ ಮದುವೆ ಸಂಭ್ರಮದಲ್ಲಿ ಮುಳುಗಿದ್ದರು. ಜೋಧ್‍ಪುರದಲ್ಲಿ ಈ ಸಂಭ್ರಮದ ಮದುವೆ ನಡೆದಿದೆ. ಟ್ರೆಡಿಷನಲ್ ಲುಕ್‍ನಲ್ಲಿ ಅಲಿಯಾ ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ, ಮದುವೆ ಮುನ್ನದ ಸಂಗೀತ್ ಸೇರಿದಂತೆ ಇತರ ಕಾರ್ಯಕ್ರಮಗಳ ಕ್ಷಣ ಕ್ಷಣದ ಅಪ್‍ಡೇಟನ್ನು ಅಲಿಯಾ ತನ್ನ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ನೀಡುತ್ತಿದ್ದರು.

#aliabhatt #aliaa #aliaabhat143 #themehtawedding #wedding

A post shared by Alia Bhatt ✨⭐ (@aliaabhat143) on

#aliabhatt #aliaabhat143 #manishmalhotra #yellow #beautiful

A post shared by Alia Bhatt ✨⭐ (@aliaabhat143) on

ಡ್ಯಾನ್ಸ್, ಮೆಹಂತಿ ಶಾಸ್ತ್ರ ಸೇರಿದಂತೆ ಎಲ್ಲಾ ವಿವರಗಳು ಅಲಿಯಾ ಸಾಮಾಜಿಕ ಜಾಲತಾಣದ ಪೇಜ್‍ನಲ್ಲಿ ಸಿಗುತ್ತಿತ್ತು. ಅಲಿಯಾ ಅಪ್‍ಡೇಟ್‍ಗೆ ಅಭಿಮಾನಿಗಳೂ ಫಿದಾ ಆಗಿದ್ದರು. ಸಾಕಷ್ಟು ಅಭಿಮಾನಿಗಳು ಲೈವ್‍ನಲ್ಲಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲೈಕ್ ಬಟನ್‍ಗಳನ್ನು ಒತ್ತಿದ್ದರು. ಕಮೆಂಟ್ಸ್‍ಗಳನ್ನು ಹಾಕುತ್ತಿದ್ದರು. ಅಭಿಮಾನಿಗಳ ಈ ಪ್ರೀತಿಗೆ ಕರಗಿ ನೀರಾದ ಅಲಿಯಾ ಕಣ್ಣೀರಿಟ್ಟರು.


ಇದು ನೋವಿನ ಕಣ್ಣೀರಲ್ಲ. ಆನಂದ ಬಾಷ್ಪ… ಅದನ್ನು ಅಲಿಯಾ ತನ್ನ ಟ್ವಿಟರ್ ಪೇಜ್‍ನಲ್ಲೂ ಹಾಕಿಕೊಂಡಿದ್ದಾರೆ…

About sudina

Check Also

ಕೊನೆಗೂ ಈಡೇರಿತು ತ್ರಿಶಾ ಕಂಡಿದ್ದ ಬಹು ದಿನಗಳ ಕನಸು…

ಚೆನ್ನೈ : ಖ್ಯಾತ ನಟಿ ತ್ರಿಶಾ ಈಗ ಸಖತ್ ಖುಷಿಯಲ್ಲಿದ್ದಾರೆ. ಅವರ ಆಸೆಯೊಂದು ಕೊನೆಗೂ ಕೈಗೂಡಿದೆ… ದಕ್ಷಿಣ ಭಾರತ ಬಹುತೇಕ …

Leave a Reply

Your email address will not be published. Required fields are marked *

error: Content is protected !!