Monday , February 19 2018
Home / Film News / `ಅತ್ಯಾಚಾರ, ಮಹಿಳಾ ದೌರ್ಜನ್ಯಕ್ಕೆ ಬ್ಯಾನ್ ಮಾಡಿ, ಪದ್ಮಾವತ್‍ಗಲ್ಲ…’
Buy Bitcoin at CEX.IO

`ಅತ್ಯಾಚಾರ, ಮಹಿಳಾ ದೌರ್ಜನ್ಯಕ್ಕೆ ಬ್ಯಾನ್ ಮಾಡಿ, ಪದ್ಮಾವತ್‍ಗಲ್ಲ…’

ಮುಂಬೈ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ದೀಪಿಕಾ ಪಡುಕೋಣೆ ನಟನೆಯ ಪದ್ಮಾವತ್ ಚಿತ್ರದ ವಿವಾದ ಬಗೆಹರಿಯುತ್ತಲೇ ಇಲ್ಲ. ಜನವರಿ 25ಕ್ಕೆ ಚಿತ್ರ ಬಿಡುಗಡೆ ಮಾಡುವುದಕ್ಕೆ ಸುಪ್ರೀಂಕೋರ್ಟ್ ಕೂಡಾ ಅಸ್ತು ಎಂದಿದ್ದು, ಎಲ್ಲಾ ನಿಷೇಧವನ್ನು ತೆರವುಗೊಳಿಸಿದೆ. ಆದರೂ ಕರ್ಣಿ ಸೇನಾ ಸೇರಿದಂತೆ ಕೆಲವರು ರಾಜ್ಯ ಸರ್ಕಾರಗಳು ಚಿತ್ರದ ವಿರುದ್ಧ ಇವೆ. ಸುಪ್ರೀಂಕೋರ್ಟ್ ತನ್ನ ನಿರ್ಧಾರವನ್ನು ಪುನರ್‍ಪರಿಶೀಲಿಸಬೇಕು ಅಂತ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರ ಮತ್ತೆ ಮನವಿ ಮಾಡಿಕೊಂಡಿದೆ. ಕೆಲ ಮಹಿಳೆಯರು ಚಿತ್ರ ಬಿಡುಗಡೆಯಾದರೆ ಆತ್ಮಹತ್ಯೆ ಮಾಡೋದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಈ ನಡುವೆ, ಚಿತ್ರದ ಪರವಾದ ಮಾತುಗಳೂ ಕೇಳಿ ಬರುತ್ತಿವೆ. ಪದ್ಮಾವತ್ ಚಿತ್ರಕ್ಕೆ ಹಲವರು ಬೆಂಬಲವಾಗಿ ನಿಂತಿದ್ದಾರೆ. ಅದರಲ್ಲೂ ನಟಿ ರೇಣುಕಾ ಶಹಾನೆ ವಿಭಿನ್ನವಾಗಿಯೇ ಚಿತ್ರದ ಪರ ಧ್ವನಿ ಎತ್ತಿದ್ದಾರೆ. `ಸಮಾಜದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯ, ಅತ್ಯಾಚಾರ, ಕಿರುಕುಳವನ್ನು ಮೊದಲು ಬ್ಯಾನ್ ಮಾಡಿ. ಪದ್ಮಾವತ್ ಚಿತ್ರಕ್ಕಲ್ಲ’ ಎಂದು ಪೋಸ್ಟ್ ಹಿಡಿದ ಫೋಟೋವನ್ನು ಫೇಸ್‍ಬುಕ್‍ಗೆ ರೇಣುಕಾ ಹಾಕಿಕೊಂಡಿದ್ದಾರೆ. ಈ ಫೋಟೋ ಈ ವೈರಲ್ ಆಗಿದೆ.

CEX.IO Bitcoin Exchange

About sudina

Check Also

ಸುಪ್ರೀಂಕೋರ್ಟ್​ ತೀರ್ಪು ಬೇಸರ ತರಿಸಿದೆ : ರಜನಿಕಾಂತ್

ಚೆನ್ನೈ : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಬೇಸರ ತರಿಸಿದೆ ಎಂದು ಸೂಪರ್ …

Leave a Reply

Your email address will not be published. Required fields are marked *

error: Content is protected !!